ADVERTISEMENT

ಪಠ್ಯ ವಿವಾದ: ಪ್ರತಿಭಟನೆಗೆ ಬಂಡಾಯ ಸಾಹಿತ್ಯ ಸಂಘಟನೆ ಬೆಂಬಲ

ಈ ವರ್ಷ ಬರಗೂರು ಸಮಿತಿಯ ಪುಸ್ತಕಗಳನ್ನು ಮುಂದುವರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 19:28 IST
Last Updated 13 ಜೂನ್ 2022, 19:28 IST
   

ಬೆಂಗಳೂರು: ‘ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ’ಯು ಮರುಪರಿಷ್ಕರಣೆ ಪಠ್ಯಪುಸ್ತಕಗಳ ವಾಪಸಾತಿಗಾಗಿ ಜೂನ್ 18ರಂದು ನಡೆಸಲಿರುವ ಪ್ರತಿಭಟನೆಗೆ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯು ಬೆಂಬಲ ಸೂಚಿಸಿದೆ.

ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ 27 ಸಮಿತಿಗಳ 172 ಜನ ತಜ್ಞರೂ, ಅಧ್ಯಾಪಕರೂ ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನು ಮರು ಪರಿಷ್ಕರಿಸಿರುವ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯು ಜಾತಿವಾದ ಮತ್ತು ಧಾರ್ಮಿಕ ಮೂಲಭೂತ ವಾದಗಳನ್ನು ಅಳವಡಿಸಿರುವುದನ್ನು ಖಂಡಿಸುವುದಾಗಿ ಪ್ರಕಟಣೆ ತಿಳಿಸಿದೆ.

‘ರಾಜ್ಯದಾದ್ಯಂತ ಇರುವ ನಮ್ಮ ಸಂಘಟನೆಯ ಸಂಗಾತಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ನಾಡಿನ ಎಲ್ಲ ವಿಚಾರಶೀಲ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿ, ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು’ ಎಂದು ಸಂಘಟನೆ ವಿನಂತಿಸಿದೆ.

ADVERTISEMENT

‘ಶಿಕ್ಷಣ ಕ್ಷೇತ್ರವನ್ನು ಹಿಂದೆಂದೂ ಇಷ್ಟು ಗೊಂದಲಕ್ಕೆ ತಳ್ಳಿದ ನಿದರ್ಶನ ಗಳು ನಮ್ಮ ರಾಜ್ಯದಲ್ಲಿ ಇಲ್ಲ. ಪಠ್ಯಪುಸ್ತಕಗಳ ಮರುಪರಿಷ್ಕರಣೆಯಲ್ಲಿ ಸಂವಿಧಾನದ ಆಶಯಗಳನ್ನು ಉಲ್ಲಂಘಿ ಸಿರುವುದು ಸ್ಪಷ್ಟವಾಗಿದೆ. ತಾವು ಮಾಡಿದ ತಪ್ಪುಗಳು ಬಯಲಾಗುತ್ತಿದ್ದಂತೆ ವಿತಂಡವಾದವನ್ನು ಮಾಡುತ್ತ ಮತ್ತಷ್ಟು ತಪ್ಪು ಮಾಡುತ್ತಿರುವ ಮರುಪರಿಷ್ಕರಣೆಯ ಅಧ್ಯಕ್ಷರು ಮತ್ತು ಶಿಕ್ಷಣ ಸಚಿವರು ಇನ್ನಾದರೂ ಶೈಕ್ಷಣಿಕ ವಿವೇಕವನ್ನು ರೂಢಿಸಿಕೊಳ್ಳ ಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಜಾಯಿಷಿ ನೀಡುವ ಬದಲು ಮರುಷರಿಷ್ಕರಣೆಯ ಪಠ್ಯಗಳನ್ನು ರದ್ದು ಮಾಡಿ, ಈ ವರ್ಷಕ್ಕೆ ಬರಗೂರು ಸಮಿತಿಯ ಪುಸ್ತಕ
ಗಳನ್ನು ಮುಂದುವರಿಸಬೇಕು’ ಎಂದೂ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.