ADVERTISEMENT

ಅಕ್ಟೋಬರ್‌ 31ರವರೆಗೆ ಥಾಯ್ಲೆಂಡ್‌ಗೆ ಉಚಿತ ವೀಸಾ

ಬೆಂಗಳೂರಿನಲ್ಲಿ ಥಾಯ್‌ ಏರ್‌ವೇಸ್‌: 15ರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 20:17 IST
Last Updated 26 ಜುಲೈ 2019, 20:17 IST
ಥಾಯ್‌ ಏರ್‌ವೇಸ್‌ನ ಬೆಂಗಳೂರು ವಿಮಾನಯಾನ ಆರಂಭವಾಗಿ 15 ವರ್ಷ ಪೂರ್ಣಗೊಂಡ ಪ್ರಯುಕ್ತ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಥಾಯ್ಲೆಂಡ್‌ ರಾಯಭಾರಿ ಚುಟನ್‌ಟಾರ್ನ್‌ ಗಾಂಗ್‌ಸಕ್ಡಿ (ಎಡದಿಂದ 1ನೆಯವರು) ಸಭಿಕರಿಗೆ ನಮಸ್ಕರಿಸಿದರು. -- – ಪ್ರಜಾವಾಣಿ ಚಿತ್ರ
ಥಾಯ್‌ ಏರ್‌ವೇಸ್‌ನ ಬೆಂಗಳೂರು ವಿಮಾನಯಾನ ಆರಂಭವಾಗಿ 15 ವರ್ಷ ಪೂರ್ಣಗೊಂಡ ಪ್ರಯುಕ್ತ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಥಾಯ್ಲೆಂಡ್‌ ರಾಯಭಾರಿ ಚುಟನ್‌ಟಾರ್ನ್‌ ಗಾಂಗ್‌ಸಕ್ಡಿ (ಎಡದಿಂದ 1ನೆಯವರು) ಸಭಿಕರಿಗೆ ನಮಸ್ಕರಿಸಿದರು. -- – ಪ್ರಜಾವಾಣಿ ಚಿತ್ರ   

ಬೆಂಗಳೂರು: ಬೆಂಗಳೂರಿನಿಂದ ಥಾಯ್‌ಏರ್‌ವೇಸ್‌ ಸೇವೆ ಆರಂಭವಾಗಿ 15 ವರ್ಷ ಪೂರೈಸಿರುವ ಪ್ರಯುಕ್ತ ಥಾಯ್ಲೆಂಡ್‌ಗೆ ಪ್ರವಾಸ ಮಾಡುವ ಭಾರತೀಯರಿಗೆ ಅಕ್ಟೋಬರ್‌ 31ರವರೆಗೆ ಉಚಿತ ವೀಸಾ ಸೌಲಭ್ಯ ನೀಡುವ ಸೇವೆ ಮುಂದುವರಿಯಲಿದೆ ಎಂದು ಭಾರತದಲ್ಲಿರುವ ಥಾಯ್ಲೆಂಡ್ ರಾಯಭಾರಿ ಚುಟನ್‌ಟಾರ್ನ್‌ ಗಾಂಗ್‌ಸಕ್ಡಿ ಹೇಳಿದರು.

ನಗರದ ಶಾಂಘ್ರಿಲಾ ಹೋಟೆಲ್‌ನಲ್ಲಿ ಶುಕ್ರವಾರ 15ನೇ ಸಂಭ್ರಮಾಚರಣೆ ಪ್ರಯುಕ್ತ ನಡೆದ ‘ವೈಬ್ರೆನ್ಸಿ ಆಫ್‌ ಗಾರ್ಡನ್‌ ಸಿಟಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

15 ವರ್ಷಗಳಲ್ಲಿ ಬೆಂಗಳೂರಿನಿಂದ 11 ಲಕ್ಷ ಪ್ರಯಾಣಿಕರು ಥಾಯ್‌ ಏರ್‌ವೇಸ್‌ ಮೂಲಕ 60 ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಿದ್ದಾರೆ. 2030ರ ವೇಳೆಗೆ 1 ಕೋಟಿ‍ಪ್ರಯಾಣಿಕರನ್ನು ಕರೆದೊಯ್ಯುವ ಗುರಿ ಇದೆ ಎಂದರು.

ADVERTISEMENT

ಥಾಯ್‌ ಏರ್‌ವೇಸ್‌ನ ಭಾರತದ ಪ್ರಧಾನ ವ್ಯವಸ್ಥಾಪಕ ಥಾಮಾನೂನ್‌ ಕುಪ್ರಸರ್ಟ್‌ ಮಾತನಾಡಿ, ಪ್ರತಿದಿನ ಬೆಂಗಳೂರು ಮತ್ತು ಬ್ಯಾಂಕಾಕ್‌ ನಡುವೆ ತಡೆರಹಿತ ವಿಮಾನಯಾನ ಸೇವೆ ಇದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.