
ಕೋಗಿಲು ಲೇಔಟ್ ಪ್ರದೇಶದಲ್ಲಿ ಶೆಡ್‌ಗಳನ್ನು ತೆರವುಗೊಳಿಸಿರುವುದು.
ಯಲಹಂಕ: ಕೋಗಿಲು ಲೇಔಟ್‌ನಲ್ಲಿ ಶೆಡ್‌ಗಳ ತೆರವು ಕಾರ್ಯಾಚರಣೆಯಿಂದ ಬೀದಿಗೆ ಬಿದ್ದಿರುವ ನಿವಾಸಿಗಳು, ಎಂಟು ದಿನಗಳಿಂದ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಶೆಡ್‌ಗಳನ್ನು ತೆರವುಗೊಳಿಸಿರುವ ಜಾಗದಲ್ಲೇ ಟಾರ್ಪಲ್ ಶೀಟ್ ಹಾಕಿಕೊಂಡು ವಾಸ ಮುಂದುವರಿಸಿದ್ದಾರೆ.
‘ಸರ್ಕಾರ ಮೂರು ಕಿಲೋಮೀಟರ್ ದೂರದಲ್ಲಿ ತಾತ್ಕಾಲಿಕ ಆಶ್ರಯ ಕೇಂದ್ರ ತೆರೆದಿದೆ. ನಾವು ಅಲ್ಲಿಗೆ ಹೋದರೆ ಇಲ್ಲಿ ಸಂಪೂರ್ಣವಾಗಿ ತೆರವು ಮಾಡಿ ಬೇಲಿ ಹಾಕುತ್ತಾರೆ. ಎಷ್ಟೇ ಕಷ್ಟವಾದರೂ ನಾವು ಇಲ್ಲೇ ಇರುತ್ತೇವೆ. ಪುನರ್ವಸತಿ ಕಲ್ಪಿಸುವವರೆಗೂ ಈ ಜಾಗಬಿಟ್ಟು ಕದಲುವುದಿಲ್ಲ’ ಎಂದು ಹೇಳಿದ್ದಾರೆ.
ಕುಡಿಯಲು ನೀರು, ತಿನ್ನಲು ಆಹಾರವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರದಿಂದ ಯಾವುದೇ ಮೂಲ ಸೌಲಭ್ಯಗಳ ವ್ಯವಸ್ಥೆ ಆಗಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಹಲವು ಸಂಘ–ಸಂಸ್ಥೆಗಳು ಊಟ ಹಾಗೂ ನೀರಿನ ವ್ಯವಸ್ಥೆ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಸ್ಥಳಕ್ಕೆ ಭೇಟಿ ನೀಡಿದರು. ‘ಕೇರಳದಿಂದ ಸಂಸದರು, ಶಾಸಕರು ಬರುತ್ತಿದ್ದಾರೆ. ನಿಮಗೆ ಇಲ್ಲಿ ಬರಲು ಏನು ಕಷ್ಟ? ಚುನಾವಣೆ ಸಂದರ್ಭದಲ್ಲಿ ನಿಮಗೆ ಮುಸ್ಲಿಮರ ಮತ ಬೇಕು, ಆದರೆ ಈಗ ಮುಸ್ಲಿಮರು ಬೇಡವೇ? ಸಚಿವ ಕೃಷ್ಣ ಬೈರೇಗೌಡ ಸ್ಥಳಕ್ಕೆ ಯಾಕೆ ಬಂದಿಲ್ಲ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.