
ಸಾದರ ಸ್ವೀಕಾರ
ಬೆಂಗಳೂರು: ಅಲಯನ್ಸ್ ವಿಶ್ವವಿದ್ಯಾಲಯ ಮತ್ತು ತುಳು ವರ್ಲ್ಡ್ ಫೌಂಡೇಷನ್ ಜಂಟಿಯಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲಕ್ಷ್ಮೀ ಜಿ. ಪ್ರಸಾದ್ ಅವರ ‘ದಿ ಥೌಸಂಡ್ ಆ್ಯಂಡ್ ಒನ್ ದೈವಾಸ್ ಆಫ್ ಕರಾವಳಿ’ ಪುಸ್ತಕ ಜನಾರ್ಪಣೆಯಾಯಿತು.
ಇದು ‘ಕರಾವಳಿಯ ಸಾವಿರದೊಂದು ದೈವಗಳು’ ಪುಸ್ತಕದ ಇಂಗ್ಲಿಷ್ ಆವೃತ್ತಿಯಾಗಿದೆ. ತುಳು ವರ್ಲ್ಡ್ ಫೌಂಡೇಷನ್‌ನ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರು ಪುಸ್ತಕ ಜನಾರ್ಪಣೆ ಮಾಡಿದರು. ಕಾರವಾರದಿಂದ ಕೊಟ್ಟಾಯಂವರೆಗಿನ ಕೊಡವ, ಕನ್ನಡ, ತುಳು, ಮಲಯಾಳ ಭಾಷಾ ಪರಿಸರದ 1,259 ದೈವಗಳ ಸಚಿತ್ರ ಮಾಹಿತಿಯುಳ್ಳ ಗ್ರಂಥವನ್ನು ಅಶ್ವಿನಿ ಭಟ್ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.
ಗ್ರಂಥದ ಲೇಖಕಿ ಲಕ್ಷ್ಮೀ ಜಿ. ಪ್ರಸಾದ್, ಅನುವಾದಕಿ ಅಶ್ವಿನಿ ಭಟ್, ಬೋರ್ಲ ರತ್ನಾಕರ ಶೆಟ್ಟಿ ಮುಂಬೈ, ಮಂಜುಳಾ ಕಾಸರಗೋಡು, ಎ.ಎಂ. ಶ್ರೀಧರನ್, ವೈ.ಎನ್. ಶೆಟ್ಟಿ, ದೇವಾನಂದ ಶೆಟ್ಟಿ ಬಸ್ರೂರು, ಕಿಶೋರ್ ರೈ ಶೇಣಿ, ರಾಜೇಶ್ ಆಳ್ವ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.