ADVERTISEMENT

ಬೆಂಗಳೂರು: ರಂಗ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 22:55 IST
Last Updated 19 ಜುಲೈ 2025, 22:55 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಉದಯಭಾನು ರಂಗ ಶಾಲೆಯಿಂದ ಉದಯಭಾನು ಕಲಾ ಸಂಘದಲ್ಲಿ ಇದೇ 21ರಿಂದ ಇಪ್ಪತ್ತೊಂದು ದಿನಗಳ ‘ರಂಗ ಮುಂಗಾರು ತರಬೇತಿ ಶಿಬಿರ’ವನ್ನು ಆಯೋಜಿಸಲಾಗುತ್ತಿದೆ.

ADVERTISEMENT

ಪ್ರತಿ ದಿನ ಸಂಜೆ ಶಿಬಿರ ನಡೆಯಲಿದೆ. ರಂಗನಟನೆ, ನೇಪತಥ್ಯ, ಮುಖವರ್ಣಿಕೆ, ವಸ್ತ್ರವಿನ್ಯಾಸ, ಮೇಳ, ಧ್ವನಿ–ಬೆಳಕು ವ್ಯವಸ್ಥೆಗಳ ಪ್ರಾಥಮಿಕ ಪರಿಚಯ ಮತ್ತು ತರಬೇತಿ ನೀಡಲಾಗುತ್ತದೆ. ‌ರಂಗಕರ್ಮಿ, ನಿರ್ದೇಶಕ ಸಾಗರ್ ನೀನಾಸಂ ಅವರ ನೇತೃತ್ವದಲ್ಲಿ ಶಿಬಿರ ನಡೆಯಲಿದೆ.

13 ವರ್ಷಕ್ಕಿಂತ ಮೇಲ್ಪಟ್ಟವ ಆಸಕ್ತರು ಇರುವ ಶಿಬಿರದಲ್ಲಿ ಭಾಗವಹಿಸಬಹುದು.

ಹೆಚ್ಚಿನ ವಿವರಗಳಿಗೆ 080-26609343 ದೂರವಾಣಿ ಸಂಖ್ಯೆಗೆ (ಬೆಳಿಗ್ಗೆ 10ರಿಂದ ಮಧ್ಯಾಹ್ನ 1, ಸಂಜೆ 5 ರಿಂದ ರಾತ್ರಿ 8ರ ನಡುವೆ) ಸಂಪರ್ಕಿಸಬಹುದು. ವಾಟ್ಸ್‌ಆ್ಯಪ್ ಸಂಖ್ಯೆ 98441 92952 ಮೂಲಕ ಸಂದೇಶ ಕಳಿಸಿ ಹೆಸರು ನೋಂದಾಯಿಸಬಹುದು ಎಂದು ಕಲಾಸಂಘದ ಗೌರವ ಕಾರ್ಯದರ್ಶಿ ರಾಧಾಕೃಷ್ಣ ಕೌಂಡಿನ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.