ADVERTISEMENT

ಬೆಂಗಳೂರು | ಟಿಪ್ಪರ್ ಡಿಕ್ಕಿ: ಸವಾರ ಸಾವು– ಜನರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 4:50 IST
Last Updated 1 ಅಕ್ಟೋಬರ್ 2025, 4:50 IST
ಮೃತ ಹನುಮಂತರಾಜು
ಮೃತ ಹನುಮಂತರಾಜು   

ದಾಬಸ್‌ಪೇಟೆ: ಮಾದೇನಹಳ್ಳಿ-ನಿಜಗಲ್ ಕೆಂಪೋಹಳ್ಳಿ ನಡುವಿನ ಮಧುಗಿರಿ ರಸ್ತೆಯಲ್ಲಿ  ಟಿಪ್ಪರ್ ಹರಿದು ವಿವೇಕಾನಂದ ಶಾಲೆಯ ಬಸ್ ಚಾಲಕ ಹನುಮಂತರಾಜು ಮೃತಪಟ್ಟಿದ್ದಾರೆ.

ನರಸೀಪುರದ ಹನುಮಂತರಾಜು ಅವರು ಕೆಲಸಕ್ಕೆ ತೆರಳಿದ್ದ ತಮ್ಮ ಪತ್ನಿಯನ್ನು ಕರೆದುಕೊಂಡು  ದ್ವಿಚಕ್ರ ವಾಹನದಲ್ಲಿ ಬರುವಾಗ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಇಬ್ಬರೂ ಕೆಳಗೆ ಬಿದ್ದಿದ್ದು, ಪತಿ ಮೇಲೆ ಲಾರಿ ಚಕ್ರ ಹರಿದಿದೆ.  

ಈ ರಸ್ತೆಯಲ್ಲಿ ಟಿಪ್ಪರ್ ಲಾರಿಗಳು ವೇಗವಾಗಿ ಸಂಚಾರ ಮಾಡುತ್ತವೆ. ಇದರಿಂದಲೇ ಅಪಘತವಾಗಿದೆ ಎಂದು ಗ್ರಾಮಸ್ಥರು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಪಂಚಾಯಿತಿ ಮುಂದೆ  ಶವದೊಂದಿಗೆ ಮಂಗಳವಾರ  ಪ್ರತಿಭಟನೆ ನಡೆಸಿದರು.

ದಾಬಸ್‌ಪೇಟೆ ಠಾಣೆ ಇನ್‌ಸ್ಪೆಕ್ಟರ್‌ ರಾಜು, ಪಂಚಾಯಿತಿ ಅಧ್ಯಕ್ಷ ರಾಮಾಂಜನೇಯ ಅವರು  ಪ್ರತಿಭಟನಕಾರರ ಮನವೊಲಿಸಿದರು. ಬಳಿಕ ಅಂತ್ಯ ಸಂಸ್ಕಾರ ನೆರವೇರಿತು. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.