‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು 14 ಸಂಪುಟಗಳು, ತೇಜಸ್ವಿ ಸಾಹಿತ್ಯ–ಸಾಂಸ್ಕೃತಿಕ ಹಬ್ಬ’ ರಾಷ್ಟ್ರೀಯ ವಿಚಾರಸಂಕೀರಣ: ಬೆಳಿಗ್ಗೆ 10ಕ್ಕೆ ‘ತೇಜಸ್ವಿ ಸಾಹಿತ್ಯ ಚಲನಚಿತ್ರಗಳ ಪ್ರಯೋಗ’ ಕುರಿತು ಗೋಷ್ಠಿ: ಕೋಟಿಗಾನಹಳ್ಳಿ ರಾಮಯ್ಯ, ಶಶಾಂಕ್ ಸೊಗಾಲ್, ಜ್ಯೋತಿ, ಪಾರ್ವತಿ ಎಂ., ಬೆಳಿಗ್ಗೆ 11ಕ್ಕೆ ‘ತೇಜಸ್ವಿ ಅನುವಾದ ಸಾಹಿತ್ಯ’ ಕುರಿತು ಗೋಷ್ಠಿ: ವಿ.ಬಿ. ತಾರಕೇಶ್ವರ್, ಚಂದ್ರಶೇಖರ್ ಬೆಟ್ಟಹಳ್ಳಿ, ಶಿವಕುಮಾರ್ ಕಾರೇಪುರ, ಮಧ್ಯಾಹ್ನ 12ಕ್ಕೆ ‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯಚಿತ್ರ ಸರಣಿ ಪ್ರದರ್ಶನ, ಮಧ್ಯಾಹ್ನ 2ಕ್ಕೆ ‘ತೇಜಸ್ವಿ ಸಾಹಿತ್ಯ ಹೊಸ ಓದು ಪ್ರಭಾವ ಪರಿಣಾಮ ಹಾಗೂ ರಂಗಪ್ರಯೋಗ’ದ ಸಂವಾದ: ನಟರಾಜ್ ಹೊನ್ನವಳ್ಳಿ, ವಿಜಯಕುಮಾರ್ ವಿಶ್ವಮಾನವ, ಶೋಭಾರಾಣಿ ಕಿಶೋರ್ ಕೆ., ಮಧ್ಯಾಹ್ನ 3.30ಕ್ಕೆ ‘ತೇಜಸ್ವಿ ಒಡನಾಡಿಗಳೊಂದಿಗೆ’ ಸಂವಾದ, ಸಂಜೆ 6ಕ್ಕೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು 14 ಸಂಪುಟಗಳು ಬಿಡುಗಡೆ: ಸಿದ್ದರಾಮಯ್ಯ, ಅಧ್ಯಕ್ಷತೆ: ಸರೋಜ ಎಂ. ಚಂದ್ರಶೇಖರ್, ಆಯೋಜನೆ: ಮೂನಿಸ್ವಾಮಿ ಆ್ಯಂಡ್ ಸನ್ಸ್, ಎಂ. ಚಂದ್ರಶೇಖರ್ ಪ್ರತಿಷ್ಠಾನ, ಪೂರ್ಣಚಂದ್ರ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ.
‘ವಿಮುಕ್ತ ದನಿ’ ಪತ್ರಿಕೆ, ‘ಪರಿವರ್ತನೆ ಅಲೆಗಳು–ಹತ್ತು ವರ್ಷದ ಸಬಲೀಕರಣ’ ಸಾಕ್ಷ್ಯಚಿತ್ರ ಬಿಡುಗಡೆ: ಇಂದೂಧರ ಹೊನ್ನಾಪುರ, ಕೆ. ರತ್ನಪ್ರಭಾ, ಅಧ್ಯಕ್ಷತೆ: ದಾಸಪ್ಪ ನಿಲೋಗಲ್, ಆಯೋಜನೆ: ವಿಮುಕ್ತ ದೇವದಾಸಿ ಮಹಿಳಾ ವೇದಿಕೆ, ಸ್ಥಳ: ಪ್ರೆಸ್‌ಕ್ಲಬ್, ಕಬ್ಬನ್ ಉದ್ಯಾನ, ಬೆಳಿಗ್ಗೆ 11
ನವೀಕೃತ ಫಿಲಾಟೆಲಿ ಬ್ಯೂರೊ ಉದ್ಘಾಟನೆ: ಎಸ್.ರಾಜೇಂದ್ರ ಕುಮಾರ್. ಸ್ಥಳ: ಪ್ರಧಾನ ಅಂಚೆ ಕಚೇರಿ,
ಬೆಳಿಗ್ಗೆ 11.30
ಒಲಿಂಪಿಕ್ಸ್ ಅಂಚೆ ಚೀಟಿ ಪ್ರದರ್ಶನ:
ಪ್ಯಾರಿಸ್ ಒಲಿಂಪಿಕ್ಸ್ ಅಂಗವಾಗಿ, ನಗರದ ಫಿಲಾಟೆಲಿಸ್ಟ್ ಜಗನ್ನಾಥ ಮಣಿ ಅವರು ಸಂಗ್ರಹಿಸಿರುವ ಒಲಿಂಪಿಕ್ ಕ್ರೀಡೆಗಳ ಅಂಚೆಚೀಟಿ, ವಿಶೇಷ ಕವರ್‌ಗಳ ಪ್ರದರ್ಶನ ನಗರದ ಮ್ಯೂಸಿಯಂ ರಸ್ತೆಯಲ್ಲಿರುವ ಅಂಚೆ ಕಚೇರಿಯ ‘ಸಂದೇಶ’ ಮ್ಯೂಸಿಯಂನಲ್ಲಿ ನಡೆಯಲಿದೆ.
ಸೋಮವಾರ ಮಧ್ಯಾಹ್ನ 12 ಗಂಟೆಗೆ ಪ್ರದರ್ಶನದ ಉದ್ಘಾಟನೆಯನ್ನು ಪದ್ಮಶ್ರೀ ಪುರಸ್ಕೃತ ಪ್ಯಾರಾ ಅಥ್ಲೀಟ್ ಕೆ.ವೈ. ವೆಂಕಟೇಶ್ ನೆರವೇರಿಸುವರು. ಆಗಸ್ಟ್ ಕೊನೆಯವರೆಗೆ ಈ ಪ್ರದರ್ಶನ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.