ADVERTISEMENT

ಪ್ರೇಮಲತಾಗೆ ಉನ್ನತ ಶ್ರೇಣಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 19:47 IST
Last Updated 5 ಏಪ್ರಿಲ್ 2019, 19:47 IST
ಪ್ರೇಮಲತಾ ದಿವಾಕರ್‌ ಅವರಿಗೆ ಬೆಂಗಳೂರು ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕ ಜಿ.ಕೆ.ರವೀಂದ್ರಕುಮಾರ್ ಪ್ರಶಸ್ತಿ ಪತ್ರ ವಿತರಿಸಿದರು
ಪ್ರೇಮಲತಾ ದಿವಾಕರ್‌ ಅವರಿಗೆ ಬೆಂಗಳೂರು ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕ ಜಿ.ಕೆ.ರವೀಂದ್ರಕುಮಾರ್ ಪ್ರಶಸ್ತಿ ಪತ್ರ ವಿತರಿಸಿದರು   

ಬೆಂಗಳೂರು: ದೆಹಲಿಯ ಪ್ರಸಾರ ಭಾರತಿ ಹಾಗೂ ಆಕಾಶವಾಣಿ ನಡೆಸುವ ಭಾವಗೀತೆ ವಿಭಾಗದ ಅತ್ಯುನ್ನತ ಶ್ರೇಣಿಯ ಪರೀಕ್ಷೆಯಲ್ಲಿ ನೀಡಲಾಗುವ ‘ಟಾಪ್ ಗ್ರೇಡ್ ಕಲಾವಿದೆ’ ಗೌರವಕ್ಕೆ ಗಾಯಕಿ ಪ್ರೇಮಲತಾ ದಿವಾಕರ್‌ ಭಾಜನರಾಗಿದ್ದಾರೆ.

ಕಳೆದ ವರ್ಷ ಆಕಾಶವಾಣಿ ನಡೆಸಿದ ಪರೀಕ್ಷೆಯಲ್ಲಿ ಪ್ರೇಮಲತಾ ಭಾಗವಹಿಸಿದ್ದರು. ಕಳೆದ ವಾರ ಫಲಿತಾಂಶ ಪ್ರಕಟವಾಗಿದೆ. ಕನ್ನಡ ಸುಗಮ ಸಂಗೀತದ ಭಾವಗೀತೆ ಗಾಯಕರಲ್ಲಿ ಉನ್ನತ ಶ್ರೇಣಿ ಪಡೆದವರಲ್ಲಿ ಪ್ರೇಮಲತಾ ಕೂಡಾ ಒಬ್ಬರು. ಬೆಂಗಳೂರು ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕಜಿ.ಕೆ.ರವೀಂದ್ರಕುಮಾರ್ ಪ್ರಮಾಣಪತ್ರ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT