ADVERTISEMENT

ಸಂಚಾರ ನಿಯಮ ಉಲ್ಲಂಘನೆ; ₹389.49 ಕೋಟಿ ದಂಡ ಸಂಗ್ರಹ ಬಾಕಿ

ಅಂಕಿ–ಅಂಶಗಳ ವರದಿ ಬಿಡುಗಡೆ ಮಾಡಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 21:13 IST
Last Updated 25 ಸೆಪ್ಟೆಂಬರ್ 2021, 21:13 IST
ನಗರದಲ್ಲಿ ಸಂಚಾರ ಪೊಲೀಸರು ವಾಹನ ಸವಾರರನ್ನು ತಡೆದು ದಂಡ ಸಂಗ್ರಹ ಮಾಡಿದರು
ನಗರದಲ್ಲಿ ಸಂಚಾರ ಪೊಲೀಸರು ವಾಹನ ಸವಾರರನ್ನು ತಡೆದು ದಂಡ ಸಂಗ್ರಹ ಮಾಡಿದರು   

ಬೆಂಗಳೂರು ನಗರದಲ್ಲಿ ಸಂಭವಿಸಿರುವ ಅಪಘಾತಗಳು ಹಾಗೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಅಂಕಿ–ಅಂಶ ಸಹಿತ ವರದಿಯನ್ನು ಸಂಚಾರ ಪೊಲೀಸರು ಶನಿವಾರ ಬಿಡುಗಡೆ ಮಾಡಿದ್ದಾರೆ.

‘ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ದಾಖಲಾದ 1.01 ಕೋಟಿ ಪ್ರಕರಣಗಳಲ್ಲಿ ₹ 389.49 ಕೋಟಿ ದಂಡ ಸಂಗ್ರಹ ಬಾಕಿ ಇದೆ’ ಎಂಬುದಾಗಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಅಂಕಿ–ಅಂಶಗಳ ವಿವರವನ್ನು ಇಲ್ಲಿ ನೀಡಲಾಗಿದೆ.

‘ದಾಖಲೆ ನವೀಕರಣ ವೇಳೆ ಬಾಕಿ ದಂಡ ವಸೂಲಿ’
‘ಬಾಕಿ ದಂಡ ಪಾವತಿಗಾಗಿ ವಾಹನಗಳ ಮಾಲೀಕರಿಗೆ ನಿರಂತರವಾಗಿ ನೋಟಿಸ್‌ ನೀಡಲಾಗುತ್ತಿದೆ. ಬಹುಪಾಲು ಚಾಲಕರು ಪ್ರತಿಕ್ರಿಯೆ ನೀಡುತ್ತಿಲ್ಲ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಹೇಳಿದರು.

ADVERTISEMENT

‘ವಾಹನಗಳ ಸದೃಢತೆ ಪ್ರಮಾಣಪತ್ರ, ರಹದಾರಿ ಪತ್ರ, ವಿಮೆ, ಮಾಲಿನ್ಯ ತಪಾಸಣಾ ಪತ್ರ ಸೇರಿದಂತೆ ಎಲ್ಲ ದಾಖಲೆಗಳನ್ನು ಮಾಲೀಕರು ನವೀಕರಣ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ. ದಾಖಲೆಗಳ ನವೀಕರಣ ವೇಳೆಯಲ್ಲೇ ಬಾಕಿ ದಂಡ ವಸೂಲಿ ಮಾಡಲು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಬಗ್ಗೆ ಆರ್‌ಟಿಒ, ವಿಮಾ ಕಂಪನಿಗಳು ಹಾಗೂ ವಾಯು ಮಾಲಿನ್ಯ ತಪಾಸಣೆ ಕೇಂದ್ರಗಳ ಮಾಲೀಕರ ಜೊತೆಯೂ ಚರ್ಚಿಸಲಾಗಿದೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.