ADVERTISEMENT

54 ಬಾರಿ ಸಂಚಾರ ನಿಯಮ ಉಲ್ಲಂಘನೆ: ₹ 29,500 ದಂಡ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 21:19 IST
Last Updated 17 ಡಿಸೆಂಬರ್ 2020, 21:19 IST
54 ಬಾರಿ ನಿಯಮ ಉಲ್ಲಂಘಿಸಿದ್ದ ಬೈಕ್ ಸವಾರರಿಗೆ ಪಿಎಸ್‌ಐ ಧ್ಯಾಮಪ್ಪ ಅವರು ದಂಡದ ರಶೀದಿ ನೀಡಿದರು
54 ಬಾರಿ ನಿಯಮ ಉಲ್ಲಂಘಿಸಿದ್ದ ಬೈಕ್ ಸವಾರರಿಗೆ ಪಿಎಸ್‌ಐ ಧ್ಯಾಮಪ್ಪ ಅವರು ದಂಡದ ರಶೀದಿ ನೀಡಿದರು   

ಬೆಂಗಳೂರು: 54 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ದ್ವಿಚಕ್ರ ವಾಹನ ಸವಾರರೊಬ್ಬರಿಗೆ ₹ 29,500 ದಂಡ ವಿಧಿಸಿರುವ ಪೊಲೀಸರು, ಅವರ ವಾಹನವನ್ನೂ ಜಪ್ತಿ ಮಾಡಿದ್ದಾರೆ.

‘ಕೆಎ 02 ಜೆಕ್ಯೂ 8188 ದ್ವಿಚಕ್ರ ವಾಹನದ ಸವಾರ, ಹಲಸೂರು ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಹೊರಟಿದ್ದರು. ಅವರನ್ನು ತಡೆದಿದ್ದ ಪಿಎಸ್‌ಐ ಧ್ಯಾಮಪ್ಪ ಹಾಗೂ ಸಿಬ್ಬಂದಿ, ತಪಾಸಣೆ ನಡೆಸಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸಿಗ್ನಲ್ ಜಂಪ್, ಹೆಲ್ಮೆಟ್ ಧರಿಸದೇ ಚಾಲನೆ, ಜಿಬ್ರಾ ಕ್ರಾಸ್‌ನಲ್ಲಿ ವಾಹನ ನಿಲುಗಡೆ ಸೇರಿದಂತೆ ಹಲವು ನಿಯಮಗಳನ್ನು ಸವಾರ ಉಲ್ಲಂಘಿಸಿದ್ದರು. ಅವರಿಗೆ ದಂಡ ವಿಧಿಸಿ ವಾಹನ ಜಪ್ತಿ ಮಾಡಲಾಗಿದೆ. ಸಂಚಾರ ನಿಯಮಗಳ ಬಗ್ಗೆ ಅವರಿಗೆ ತರಬೇತಿ ನೀಡಲಾಗುವುದು. ತರಬೇತಿ ಬಳಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಾತ್ರ ವಾಹನ ಬಿಡುಗಡೆ ಮಾಡಲಾಗುವುದು’ ಎಂದೂ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.