ADVERTISEMENT

ಎಲ್ಲಾ ಕ್ಷೇತ್ರಗಳಲ್ಲೂ ತರಬೇತಿ ಅಗತ್ಯ: ಧರಣಿದೇವಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 15:49 IST
Last Updated 9 ಡಿಸೆಂಬರ್ 2024, 15:49 IST
<div class="paragraphs"><p>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ  </p></div>

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ

   

- ಪ್ರಜಾವಾಣಿ ಚಿತ್ರ

ಬೆಂಗಳೂರು: ಎಲ್ಲಾ ಕ್ಷೇತ್ರಗಳಲ್ಲೂ ತರಬೇತಿ ಅಗತ್ಯ. ತರಬೇತಿಯಿಂದ ತಪ್ಪುಗಳನ್ನು ತಿದ್ದಿಕೊಳ್ಳಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಹೇಳಿದರು. 

ADVERTISEMENT

ಕರ್ನಾಟಕ ನಾಟಕ ಅಕಾಡೆಮಿಯು ನಯನ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಪೌರಾಣಿಕ ರಂಗ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. 

‘ಎಲ್ಲ ಪ್ರತಿಭೆಗಳಿಗೂ ಪರೀಕ್ಷೆವೊಡ್ಡದಿದ್ದರೆ ತಾವು ಮಾಡಿದ್ದೆ ಸರಿ ಎಂಬ ಭಾವನೆ ಮೂಡುತ್ತದೆ. ಹಾಗಾಗಿ ಎಲ್ಲಾ ಕ್ಷೇತ್ರಗಳಲ್ಲೂ ತರಬೇತಿ ನೀಡುವುದು ಅಗತ್ಯ’ ಎಂದು ಅಭಿಪ್ರಾಯಪಟ್ಟರು. 

‘ಕರ್ನಾಟಕದ ಏಕೀಕರಣದ ಸಮಯದಲ್ಲಿ ಮುಖ್ಯ ಪಾತ್ರ ವಹಿಸಿದ್ದೇ ನಾಟಕಗಳು. ಪೌರಾಣಿಕ ನಾಟಕಗಳು ಸಮಕಾಲೀನ ಸಮಸ್ಯೆಗಳಿಗೆ ಉತ್ತರಿಸುವಂತಿರಬೇಕು. ಅದಕ್ಕಾಗಿ ಸಂಪೂರ್ಣ ಬದಲಾಗುವುದು ಬೇಡ. ‌ಆದರೆ, ಸುಧಾರಣೆ ತರುವಂತಿರಬೇಕು. ಪೌರಾಣಿಕ ರೀತಿಯನ್ನೇ ಉಳಿಸಿಕೊಂಡು ಅದರ ಜೊತೆಯೇ ಸಮಸ್ಯೆಗಳ ಚರ್ಚೆಗೆ ಅವಕಾಶ ಮಾಡಿಕೊಡುವಂತಿರಬೇಕು’ ಎಂದರು. 

ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ ನಾಗರಾಜ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ರಂಗಭೂಮಿ ಕಲಾವಿದ ರಂಗಶ್ರೀ ರಂಗಸ್ವಾಮಿ, ಬೆಂಗಳೂರು ವಿಶ್ವವಿದ್ಯಾಲಯ ಪ್ರದರ್ಶನ ಕಲಾವಿಭಾಗದ ಮುಖ್ಯಸ್ಥ ರಾಮಕೃಷ್ಣಯ್ಯ, ರಂಗ ನಿರ್ದೇಶಕ ಕಲ್ಲೂರು ಶ್ರೀನಿವಾಸ್‌ ಹಾಗೂ ಶಿಬಿರದ ನಿರ್ದೇಶಕ ಎಸ್‌. ಎಲ್‌. ಎನ್‌ ಸ್ವಾಮಿ, ಸದಸ್ಯ ಸಂಚಾಲಕರಾದ ಜಗದೀಶ ಜಾಲ, ಡಾ.ಲವಕುಮಾರ್, ರಿಜಿಸ್ಟ್ರಾರ್‌ ನಿರ್ಮಲಾ ಮಠಪತಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.