ADVERTISEMENT

ವಲಸೆ ಕಾರ್ಮಿಕರಿಗೆ ನಾಳೆ, ನಾಡಿದ್ದು ಇನ್ನೆರಡು ರೈಲುಗಳು

#TrainsForMigrants

​ಪ್ರಜಾವಾಣಿ ವಾರ್ತೆ
Published 7 ಮೇ 2020, 11:51 IST
Last Updated 7 ಮೇ 2020, 11:51 IST
ಬೆಂಗಳೂರಿನ ಚಿಕ್ಕಬಾಣಾವರ ರೈಲು ನಿಲ್ದಾಣದಿಂದ ಮೇ 4ರಂದು ರಾಜಸ್ಥಾನಕ್ಕೆ ಹೊರಟ ಪ್ರಯಾಣಿಕರು ಅಧಿಕಾರಿಗಳು ಕೈ ಮುಗಿದರು (ಪ್ರಜಾವಾಣಿ ಚಿತ್ರ: ಬಿ.ಎಚ್.ಶಿವಕುಮಾರ್)
ಬೆಂಗಳೂರಿನ ಚಿಕ್ಕಬಾಣಾವರ ರೈಲು ನಿಲ್ದಾಣದಿಂದ ಮೇ 4ರಂದು ರಾಜಸ್ಥಾನಕ್ಕೆ ಹೊರಟ ಪ್ರಯಾಣಿಕರು ಅಧಿಕಾರಿಗಳು ಕೈ ಮುಗಿದರು (ಪ್ರಜಾವಾಣಿ ಚಿತ್ರ: ಬಿ.ಎಚ್.ಶಿವಕುಮಾರ್)   

ಬೆಂಗಳೂರು: ರಾಜ್ಯದಿಂದ ಶುಕ್ರವಾರ ಮತ್ತು ಶನಿವಾರ ವಲಸೆ ಕಾರ್ಮಿಕರಿಗಾಗಿ ಎರಡು ರೈಲುಗಳು ಸಂಚರಿಸಲಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಲಸೆ ಕಾರ್ಮಿಕರು ಅವರ ರಾಜ್ಯಗಳಿಗೆ ತೆರಳುವುದಕ್ಕೆ ಯಾರೂ ಅಡ್ಡಿ ಮಾಡಿಲ್ಲ. ರೈಲು ಸಂಚಾರವನ್ನೂ ನಿಲ್ಲಿಸಲಿಲ್ಲ. ಈ ಸಂಬಂಧ ಕಾಂಗ್ರೆಸ್‌ನವರು ಅಪ ಪ್ರಚಾರ ಮಾಡುತ್ತಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಬಿಹಾರ, ಒಡಿಶಾ, ಪಶ್ಚಿಮ ಬಂಗಾಳದವರು ಕಾರ್ಮಿಕರನ್ನು ಕಳಿಸಬೇಡಿ ಎನ್ನುತ್ತಿದ್ದಾರೆ. ಅವರು ಒಪ್ಪಿಗೆ ಕೊಟ್ಟರೆ ಮಾತ್ರ ರೈಲಿನಲ್ಲಿ ಕಳಿಸಬಹುದು. ಇಲ್ಲವಾದರೆ ಇಲ್ಲ. ಇಲ್ಲಿಂದ ಹೋಗುವ ಸಾವಿರಗಟ್ಟಲೆ ಕಾರ್ಮಿಕರಿಗೆ ಕ್ವಾರೈಂಟೈನ್‌ ವ್ಯವಸ್ಥೆ ಮತ್ತು ಆರೋಗ್ಯ ರಕ್ಷಣೆ ವ್ಯವಸ್ಥೆಯನ್ನು ಅವರು ಮಾಡಿಕೊಳ್ಳಬೇಕು. ಅದೇ ಕಾರಣಕ್ಕೆಅವರು ಕಳಿಸಬೇಡಿ ಎನ್ನುತ್ತಿದ್ದಾರೆ ಎಂದು ವಿವರಿಸಿದರು.

ADVERTISEMENT

ನಾವು ಕಾರ್ಮಿಕರನ್ನಾಗಲಿ, ರೈಲನ್ನಾಗಲಿ ತಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಶುಕ್ರವಾರ ಮತ್ತು ಶನಿವಾರ ಎರಡು ರೈಲುಗಳು ಹೋಗುತ್ತವೆ ಎಂದು ಸ್ಪಷ್ಟಪಡಿಸಿದರು.

ಟ್ವಿಟರ್‌ನಲ್ಲಿ #TrainsForMigrants ಟ್ರೆಂಡಿಂಗ್

ವಲಸೆ ಕಾರ್ಮಿಕರು ತವರು ರಾಜ್ಯಗಳಿಗೆ ತೆರಳಲು ಕಲ್ಪಿಸಿದ್ದ ರೈಲು ಸಂಚಾರ ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರ ಹಿಂಪಡೆದ ವಿಚಾರವನ್ನು ಟ್ವಿಟರ್‌ನಲ್ಲಿ #TrainsForMigrants ಬಳಸಿ ಟ್ವೀಟ್ ಮಾಡುವ ಮೂಲಕ ಹಲವರು ಖಂಡಿಸಿದ್ದಾರೆ.

‘ಆಧುನಿಕ ಜೀತ ಪದ್ಧತಿ ನಿರ್ಮೂಲನೆಯಾಗಲಿ’, ‘ನಗರದಲ್ಲಿ ಬದುಕುವ ಮತ್ತು ನಗರದಿಂದ ಹೊರಗೆ ಹೋಗುವ ಹಕ್ಕು ಕಾರ್ಮಿಕರಿಗೆ ಇದೆ’ ಎಂದು ನೂರಾರು ಮಂದಿ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.