ADVERTISEMENT

ಬೆಂಗಳೂರು ನಗರದಲ್ಲಿ ಸಂಚಾರ ಪಾಸ್‌ ವಿತರಣೆ ಆರಂಭ: ಯಾರಿಗೆಲ್ಲಾ ಪಾಸ್ ಲಭ್ಯ?

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2020, 12:01 IST
Last Updated 25 ಮಾರ್ಚ್ 2020, 12:01 IST
ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್
ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್   

ಬೆಂಗಳೂರು: ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಅನ್ವಯ ರಾಜ್ಯದಲ್ಲಿಯೂ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಬೆಂಗಳೂರು ನಗರದಲ್ಲಿ ಅಗತ್ಯ ಸೇವೆ ಮತ್ತು ಸರಕು ಸಾಗಣೆಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ವಾಹನ ಸಂಚಾರಕ್ಕೆ ಪಾಸ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ತಿಳಿಸಿದ್ದಾರೆ.

ನಗರದ ಡಿಸಿಪಿ ಕಚೇರಿಗಳಲ್ಲಿ ಈ ಪಾಸುಗಳು ಲಭ್ಯ. ದಿನದ 24 ಗಂಟೆಯೂ ಪಾಸ್‌ ವಿತರಣೆಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ.

ಪಾಸ್ ಅಗತ್ಯವಿಲ್ಲ
* G ರಿಜಿಸ್ಟ್ರೇಷನ್ ಪ್ಲೇಟ್ ಇರುವ ಸರ್ಕಾರಿ ವಾಹನಗಳು.
* ಸರಕು ಸಾಗಣೆ ವಾಹನಗಳು.
* ಸಚಿವಾಲಯ ನೌಕರರು
* ಹೈಕೋರ್ಟ್‌ ನೌಕರರು
(ಎಲ್ಲಾ ಸರ್ಕಾರಿ ಮತ್ತು ಹೈಕೋರ್ಟ್‌ ನೌಕರರು ಉದ್ಯೋಗದ ಗುರುತಿನ ಪತ್ರ ಜೊತೆಯಲ್ಲಿರಿಸಿಕೊಳ್ಳುವುದು ಕಡ್ಡಾಯ).

ADVERTISEMENT

ಇವರಿಗೆಲ್ಲಾ ಪಾಸ್ ಕೊಡಲಾಗುತ್ತದೆ
* ಖಾಸಗಿ ಭದ್ರತಾ ಸಿಬ್ಬಂದಿ
* ಪೆಟ್ರೊಲ್ ಬಂಕ್, ಗ್ಯಾಸ್ ಏಜೆನ್ಸಿ, ಎಲ್‌ಪಿಜಿ ಚಿಲ್ಲರೆ ವಿತರಕರು
* ಸ್ವಿಗಿ, ಜೊಮೆಟೊ ಥರದ ಆಹಾರ ಸರಬರಾಜು ಸಂಸ್ಥೆಗಳ ನೌಕರರು, ಆನ್‌ಲೈನ್ ಔಷಧ ವಿತರಕರು, ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳ ನೌಕರರು
* ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಸಿಬ್ಬಂದಿ
* ದಿನಸಿ, ದಿನಬಳಕೆ ವಸ್ತುಗಳು, ಡೇರಿ, ಮಾಂಸ ಮತ್ತು ಮೀನು ಮಾರಾಟಮಳಿಗೆಗಳ ನೌಕರರು
* ವೈದ್ಯಕೀಯ ಸಂಸ್ಥೆಗಳ ನೌಕರರು
* ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾದಾತ ಸಂಸ್ಥೆಗಳ ಸಿಬ್ಬಂದಿ
* ಅತ್ಯಗತ್ಯ ಸೇವೆ ಒದಗಿಸುವ ಐಟಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರು
* ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಕ ಘಟಕಗಳಲ್ಲಿ ಕೆಲಸ ಮಾಡುವ ನೌಕರರು.
* ಷೇರು ಮಾರುಕಟ್ಟೆ ಸೇವಾದಾತ ಸಂಸ್ಥೆಗಳ ಸಿಬ್ಬಂದಿ
* ಶೀತಲೀಕರಣ ಘಟಕ ಮತ್ತು ಗೋದಾಮು ಸೇವೆ ಒದಗಿಸುವ ಸಿಬ್ಬಂದಿ
* ಅತ್ಯಗತ್ಯ ವಸ್ತುಗಳ ಉತ್ಪಾದನಾ ಘಟಕಗಳ ಸಿಬ್ಬಂದಿ
* ಸರ್ಕಾರದ ನಿರ್ಬಂಧ ಆದೇಶದ ಕಾರಣ ಮನೆಗಳಿಗೆ ತೆರಳಲು ಸಾಧ್ಯವಾಗದ ಪ್ರವಾಸಿಗರು ಉಳಿದುಕೊಂಡಿರುವ ಹೊಟೆಲ್ ಮತ್ತು ಲಾಡ್ಜ್‌ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.