ADVERTISEMENT

ಉಜ್ಜೀವನ್ ಬ್ಯಾಂಕ್ ವತಿಯಿಂದ ಕಿದ್ವಾಯಿಗೆ ನಾಲ್ಕು ಎಲೆಕ್ಟ್ರಿಕ್ ವಾಹನ ಕೊಡುಗೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 16:02 IST
Last Updated 17 ಫೆಬ್ರುವರಿ 2026, 16:02 IST
ಎಲೆಕ್ಟ್ರಿಕ್ ವಾಹನಕ್ಕೆ ಡಾ.ಟಿ.ನವೀನ್ ಚಾಲನೆ ನೀಡಿದರು. ಬ್ಯಾಂಕ್‌ನ ಅಧಿಕಾರಿಗಳಾದ ಪಿ.ಎಸ್.ಮಾರ್ಟಿನ್, ಸಚಿನ್ ಜಾಧವ್, ರಾಜಾ ರಾಜೇಶ್ವರನ್ ಉಪಸ್ಥಿತರಿದ್ದರು
ಎಲೆಕ್ಟ್ರಿಕ್ ವಾಹನಕ್ಕೆ ಡಾ.ಟಿ.ನವೀನ್ ಚಾಲನೆ ನೀಡಿದರು. ಬ್ಯಾಂಕ್‌ನ ಅಧಿಕಾರಿಗಳಾದ ಪಿ.ಎಸ್.ಮಾರ್ಟಿನ್, ಸಚಿನ್ ಜಾಧವ್, ರಾಜಾ ರಾಜೇಶ್ವರನ್ ಉಪಸ್ಥಿತರಿದ್ದರು   

ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್) ನಾಲ್ಕು ಎಲೆಕ್ಟ್ರಿಕ್ ವಾಹನಗಳನ್ನು ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಒದಗಿಸಿದೆ. 

ನಗರದಲ್ಲಿ ಮಂಗಳವಾರ ಈ ವಾಹನಗಳಿಗೆ ಚಾಲನೆ ನೀಡಿದ ಸಂಸ್ಥೆಯ ನಿರ್ದೇಶಕ ಡಾ.ಟಿ.ನವೀನ್, ‘ವಿವಿಧ ಪರೀಕ್ಷೆಗಳ ಸಂಬಂಧ ರೋಗಿಗಳನ್ನು ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ಕರೆದೊಯ್ಯಬೇಕಾಗುತ್ತದೆ. ರೋಗಿಗಳು ವಿವಿಧ ವೈದ್ಯಕೀಯ ವಿಭಾಗಗಳಿಗೆ ತೆರಳಲು ಈ ವಾಹನಗಳು ನೆರವಾಗಲಿವೆ. ಸಂಸ್ಥೆಯಲ್ಲಿ ಮೂಲಸೌಲಭ್ಯ ಅಳವಡಿಸಿಕೊಳ್ಳಲು ಸಿಎಸ್ಆರ್ ನಿಧಿ ಸಹಕಾರಿಯಾಗಿದೆ’ ಎಂದರು.   

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಮುಖ್ಯ ಕಾರ್ಯಾಚರಣೆ ಅಧಿಕಾರಿ (ಸಿಒಒ) ಪಿ.ಎಸ್.ಮಾರ್ಟಿನ್, ‘ಸಿಎಸ್ಆರ್ ನಿಧಿಯಡಿ ಆಸ್ಪತ್ರೆಗಳಿಗೆ ಹಲವು ಸೌಲಭ್ಯಗಳನ್ನು ‌ಒದಗಿಸಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಕ್ಯಾನ್ಸರ್ ರೋಗಿಗಳಿಗೆ ವಿವಿಧ ವಿಭಾಗಗಳಿಗೆ ತೆರಳಲು ಅನುಕೂಲವಾಗಲಿದೆ’ ಎಂದು ಹೇಳಿದರು.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.