ADVERTISEMENT

ಉದ್ಯೋಗ ತರಬೇತಿಗೆ 30ರಿಂದ ಪ್ರವೇಶ ಆರಂಭ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 14:26 IST
Last Updated 17 ಆಗಸ್ಟ್ 2021, 14:26 IST

ಬೆಂಗಳೂರು:ಉನ್ನತಿಸೆಂಟರ್‌ (ಎಸ್‌ಜಿಬಿಎಸ್‌ ಟ್ರಸ್ಟ್‌) 18 ರಿಂದ 30 ವರ್ಷದೊಳಗಿನವರಿಗೆ ಉದ್ಯೋಗ ತರಬೇತಿ ನೀಡಲಿದ್ದು, ಇದಕ್ಕಾಗಿ ಇದೇ 30ರಿಂದ ಪ್ರವೇಶ ಆರಂಭಿಸಲಿದೆ.

35 ದಿನಗಳ ತರಬೇತಿ ವೇಳೆ ಯುವಕರಿಗೆ ಇಂಗ್ಲಿಷ್‌ ಭಾಷೆಯಲ್ಲಿ ಮಾತನಾಡುವ ಕೌಶಲ, ಜೀವನ ಕೌಶಲ, ಮೌಲ್ಯಗಳು, ಸೇಲ್ಸ್‌ ಆ್ಯಂಡ್‌ ಮಾರ್ಕೆಟಿಂಗ್‌ ಹಾಗೂ ಕಂಪ್ಯೂಟರ್‌ ಕಲಿಕೆ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. ಅರ್ಹರಿಗೆ ಉದ್ಯೋಗವನ್ನೂ ಕಲ್ಪಿಸಲಾಗುತ್ತದೆ.

ಹೊರ ರಾಜ್ಯ ಹಾಗೂ ಜಿಲ್ಲೆಗಳ ಅಭ್ಯರ್ಥಿಗಳಿಗೆ ಹಾಸ್ಟೆಲ್‌ ವ್ಯವಸ್ಥೆ ಇದ್ದು, ತರಬೇತಿ ವೇಳೆ ಆಹಾರದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.

ADVERTISEMENT

ಹೆಚ್ಚಿನ ಮಾಹಿತಿಗೆ ವೈಜಯಶ್ರೀ 9900146423 ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.