ADVERTISEMENT

ಯುಪಿಎಸ್‌ಸಿ ರಿಸಲ್ಟ್: ವಿವಿಧ ಸಂಸ್ಥೆಗಳ ಅಭ್ಯರ್ಥಿಗಳು ಸಾಧನೆ

‘ಇನ್‌ಸೈಟ್ಸ್‌ ಐಎಎಸ್‌: 150ಕ್ಕೂ ಅಭ್ಯರ್ಥಿಗಳು ತೇರ್ಗಡೆ’

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 20:39 IST
Last Updated 16 ಏಪ್ರಿಲ್ 2024, 20:39 IST
ವಿನಯ್‌ ಕುಮಾರ್‌ ಜಿ ಬಿ 
ವಿನಯ್‌ ಕುಮಾರ್‌ ಜಿ ಬಿ    

ಬೆಂಗಳೂರು: ಕೇಂದ್ರ ನಾಗರಿಕ ಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ತಮ್ಮಲ್ಲಿ ತರಬೇತಿ ಪಡೆದ ಹಲವು ವಿದ್ಯಾರ್ಥಿಗಳು ಉತ್ತಮ ರ್‍ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿವಿಧ ಸಂಸ್ಥೆಗಳು ಪ್ರತಿಪಾದಿಸಿವೆ.

ಇನ್‌ಸೈಟ್‌ ಐಎಎಸ್, ಐಎಎಸ್ ಬಾಬಾ,  ಇಂಡಿಯಾ ಫಾರ್ ಐಎಎಸ್ ಅಕಾಡೆಮಿ, ಅಕ್ಕ ಐಎಎಸ್ ಅಕಾಡೆಮಿ ಹಾಗೂ ಯುನಿವರ್ಸಲ್ ಕೋಚಿಂಗ್ ಸೆಂಟರ್‌ಲ್ಲಿ ತರಬೇತಿ ಪಡೆದವರು ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ. ಸಾಧಕರ ಹೆಸರು ಮತ್ತು ಅವರ ಪಡೆದಿರುವ ರ‍್ಯಾಂಕ್‌ ಕಂಸದಲ್ಲಿ ಕೊಡಲಾಗಿದೆ. 

ಇಂಡಿಯಾ ಫಾರ್ ಐಎಎಸ್ ಅಕಾಡೆಮಿ: ಚಂದ್ರ ಲೇಔಟ್‌ನಲ್ಲಿರುವ ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯಲ್ಲಿ ತರಬೇತಿ ಪಡೆದವರಲ್ಲಿ 12 ಮಂದಿ ಉತ್ತಮ ರ‍್ಯಾಂಕ್‌ ಪಡೆದಿದ್ದಾರೆ. ನಾಗೇಂದ್ರ ಬಾಬು ಕುಮಾರ್ (160), ಶಶಾಂತ್ ಎನ್.ಎಂ. (459), ಮೇಘನ ಐ.ಎಂ. (589), ಡಾ.ಭಾನು ಪ್ರಕಾಶ್ (600), ಸುಮಾ ಎಚ್.ಕೆ. (635), ಶಾಂತಪ್ಪ ಕುರುಬರ (644), ತೇಜಸ್ ಎನ್. (668), ನವ್ಯ ಕೆ. (696), ಮೇಘನ ಕೆ.ಟಿ. (721), ವಿವೇಕ್ ರೆಡ್ಡಿ ಎನ್. (741), ಸೃಷ್ಟಿ ದೀಪ್ (748) ಮತ್ತು ಹಂಸಶ್ರೀ ಎನ್.ಎ. (866) ಉತ್ತಮ ರ್‍ಯಾಂಕ್ ಪಡೆದಿದ್ದಾರೆ.

ADVERTISEMENT

‘ವ್ಯಕ್ತಿತ್ವ ಪರೀಕ್ಷೆ ಹಾಗೂ ವಿವಿಧ ಹಂತಗಳಲ್ಲಿ ಅಕಾಡೆಮಿಯಿಂದ ಮಾರ್ಗದರ್ಶನ ಪಡೆದ ಅಭ್ಯರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಅಕಾಡೆಮಿಯ ಅಭ್ಯರ್ಥಿಗಳು ಎಲ್ಲ ಹಂತಗಳಲ್ಲಿ ಉತ್ತಮ ಸಾಧನೆ ಮಾಡಿದ್ದು, ಏಕಾಗ್ರತೆ, ಛಲಬಿಡದೇ ಅಧ್ಯಯನ ಮಾಡಿದ್ದಾರೆ’ ಎಂದು ಅಕಾಡೆಮಿ ತಿಳಿಸಿದೆ.

ಅಕ್ಕ ಐಎಎಸ್ ಅಕಾಡೆಮಿ: ಈ ಅಕಾಡೆಮಿಯಲ್ಲಿ ತರಬೇತಿ ಪಡೆದವರಲ್ಲಿ ಸೌಭಾಗ್ಯ ಎಸ್. ಬಿಳಗಿಮಠ (101), ಪೂಲ ಧನುಷ್ (480), ಶಾಂತಪ್ಪ ಕುರುಬರ (644), ಭರತ ಸಿ. ಯಾರಮ್ (667), ಮೇಘನಾ ಕೆ.ಟಿ. (721), ಚಂದನ್ ಬಿ.ಎಸ್. (731), ಹಂಸಶ್ರೀ ಎನ್.ಎ. (866), ಟಿ. ವಿಜಯಕುಮಾರ್ (953) ಉತ್ತಮ ರ್‍ಯಾಂಕ್ ಪಡೆದಿದ್ದಾರೆ.

ಯುನಿವರ್ಸಲ್ ಕೋಚಿಂಗ್ ಸೆಂಟರ್: ಈ ಕೇಂದ್ರದಲ್ಲಿ ತರಬೇತಿ ಪಡೆದವರಲ್ಲಿ 18 ಅಭ್ಯರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಅಯಾನ್ ಜೈನ್ (16), ಅಭಿಮನ್ಯು ಮಲಿಕ್ (60), ಡಾ.ಪ್ರಶಾಂತ್ ಎಸ್. (78), ಶಾಶ್ವತ್ ಅಗರವಾಲ್ (121), ಪೌರವಿ ಗುಪ್ತ (213), ಸಮೀರ್ ಗೋಯೆಲ್ (222), ಅಂಕುರ್ ಕುಮಾರ್ (344), ಶಿವಶಕ್ತಿವೇಲ್ ಸಿ. (340), ಶುಭಮ್ ರಘುವಂಶಿ (556), ಅಜಿತ್ ಸಿಂಗ್ ಖಡ್ಡ (563), ಕಾರ್ತಿಕೇಯನ್ ಎ.ಕೆ. (579) ಹಾಗೂ ಲಕ್ಷ್ಮಣ ಪ್ರತಾಪ್ ಚೌಧರಿ (597) ಉತ್ತಮ ರ‍್ಯಾಂಕ್‌ ಪಡೆದಿದ್ದಾರೆ.

ಐಎಎಎಸ್‌ ಬಾಬಾ ಕೇಂದ್ರ: ಈ ಕೇಂದ್ರದಲ್ಲಿ ತರಬೇತಿ ಪಡೆದವರಲ್ಲಿ ಕರ್ನಾಟಕದ 15 ಅಭ್ಯರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ರಮ್ಯಾ ಆರ್‌ (45), ನಾಗೇಂದ್ರ ಬಾಬು ಕುಮಾರ್ (160), ತೇಜಸ್ ಕೆ.(243), ಶಶಾಂತ್ ಎನ್.ಎಂ. (459), ರಾನು ಗುಪ್ತಾ (536), ಮೇಘನಾ ಐ.ಎನ್. (589)
ಭಾನು ಪ್ರಕಾಶ್ ಜೆ. (600), ಶಾಂತಪ್ಪ ಕುರುಬರ (644), ಭರತ್ ಸಿ. ಯಾರಾಮ್(667), ವೈಶಾಕ್ ಬಾಗಿ (684), ನವ್ಯಾ ಕೆ. (696), ಹಂಸಾಶ್ರೀ ಎನ್.ಎ. (866), ವಿಕ್ರಮ್ ಜೋಶಿ (593), ಮೇಘನಾ ಕೆ.ಟಿ. (721), ಗೌತಮ್ ಜಿ. (939) ಉತ್ತಮ ರ‍್ಯಾಂಕ್ ಪಡೆದಿದ್ದಾರೆ.

‘ಇನ್‌ಸೈಟ್ಸ್‌ ಐಎಎಸ್‌: 150ಕ್ಕೂ ಅಭ್ಯರ್ಥಿಗಳು ತೇರ್ಗಡೆ’

ದಾವಣಗೆರೆ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿರುವ ‘ಇನ್‌ಸೈಟ್ಸ್‌ ಐಎಎಸ್‌’ ಸಂಸ್ಥೆಯಲ್ಲಿ ತರಬೇತಿ ಪಡೆದ 150ಕ್ಕೂ ಹೆಚ್ಚು ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕರ್ನಾಟಕದಿಂದ ಈ ಬಾರಿ 25 ಅಭ್ಯರ್ಥಿಗಳು ಆಯ್ಕೆಯಾಗಿದ್ದು ಇದರಲ್ಲಿ ಉತ್ತಮ ರ‍್ಯಾಂಕಿಂಗ್ ಪಡೆದ 20 ಅಭ್ಯರ್ಥಿಗಳಿಗೆ ತರಬೇತಿ ಮಾರ್ಗದರ್ಶನ ನೀಡಿರುವುದು ಬೆಂಗಳೂರಿನ ‘ಇನ್‌ಸೈಟ್ಸ್‌ ಐಎಎಸ್’ ಎಂದು ಸಂಸ್ಥೆಯ ಸಂಸ್ಥಾಪಕ ಜಿ.ಬಿ.ವಿನಯ್‌ಕುಮಾರ್ ತಿಳಿಸಿದ್ದಾರೆ. ‘ಉತ್ತಮ ರ‍್ಯಾಂಕಿಂಗ್‌ನೊಂದಿಗೆ ತೇರ್ಗಡೆಯಾದ ಈ ಅಭ್ಯರ್ಥಿಗಳಲ್ಲಿ ಕೆಲವರು ನೇರವಾದ ಬೋಧನಾ ತರಗತಿ (ಒಜಿಪಿ ಕೋರ್ ಬ್ಯಾಚ್‌) ಹಾಜರಾಗಿದ್ದಾರೆ. ಬಹಳಷ್ಟು ಅಭ್ಯರ್ಥಿಗಳು ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷಾ ಸರಣಿ ಮತ್ತು ಅಣಕು ಸಂದರ್ಶನಗಳಂತಹ ಹಲವಾರು ಕಾರ್ಯಕ್ರಮಗಳ ವಿದ್ಯಾರ್ಥಿಗಳಾಗಿದ್ದಾರೆ. ನಿಗದಿತ ವೇಳಾಪಟ್ಟಿ ಶಿಸ್ತುಬದ್ಧ ತರಗತಿಗಳು ಗುಣಮಟ್ಟದ ಮಾರ್ಗದರ್ಶನ ಉತ್ತರ ಬರೆಯುವ ಕೌಶಲ ವೃದ್ಧಿ ‘ಇನ್‌ಸೈಟ್ಸ್‌ ಐಎಎಸ್’ ಸಂಸ್ಥೆಯ ವಿಶೇಷತೆಗಳಾಗಿದ್ದು ಇಂಟಿಗ್ರೇಟೆಟ್ ಕೋಚಿಂಗ್ ಮಾದರಿಯಲ್ಲಿ ಅಭ್ಯರ್ಥಿಯನ್ನು ಪರೀಕ್ಷೆಗೆ ಸಜ್ಜುಗೊಳಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.