ADVERTISEMENT

ಬೆಂಗಳೂರು: ಫೆ. 8ರಂದು ಉರ್ದು ದಿನಾಚರಣೆ, ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 14:38 IST
Last Updated 6 ಫೆಬ್ರುವರಿ 2025, 14:38 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಯುನೈಟೆಡ್‌ ಕೌನ್ಸಿಲ್‌ ಫಾರ್‌ ಎಜುಕೇಷನ್‌ ಆ್ಯಂಡ್‌ ಕಲ್ಚರ್‌ (ಯುಸಿಇಸಿ) ವತಿಯಿಂದ ಫೆಬ್ರುವರಿ 8ರಂದು ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಉರ್ದು ದಿನಾಚರಣೆ (ಜಶ್ನೆ–ಎ–ಯೂಮ್‌–ಎ–ಉರ್ದು) ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುಸಿಇಸಿಯ ಟ್ರಸ್ಟಿಗಳಾದ ಶಾಯಿಸ್ತಾ ಯೂಸೂಫ್‌, ಇಕ್ಬಾಲ್‌ ಅಹಮದ್ ಬೇಗ್‌, ‘ಕಾರ್ಯಕ್ರಮದಲ್ಲಿ ಮಾಜಿ ಐಎಎಸ್‌ ಅಧಿಕಾರಿಗಳಾದ ಅಜೀಜುಲ್‌ ಬೇಗ್‌, ಅದೋನಿ ಸೈಯದ್‌ ಸಲೀಂ, ಮಹಮ್ಮದ್ ಸಲಾಹುದ್ದೀನ್, ಮೀರ್‌ ಅನೀಸ್‌ ಅಹಮದ್, ಮಾಜಿ ಕೆಎಎಸ್‌ ಅಧಿಕಾರಿ ಎಂ.ಎ. ಖಾಲಿದ್ ಅವರಿಗೆ ‘ಉರ್ದು ದೋಸ್ತ್‌’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕಲಾವಿದ ಮಹಮ್ಮದ್ ಅಯಾಜುದ್ದೀನ್ ಪಟೇಲ್‌ ಅವರಿಗೆ ‘ಮಮ್ತಾಜ್‌ ಶಿರೀನ್‌ ಪ್ರಶಸ್ತಿ’, ಕ್ವಿಜ್‌ ಟೈಮ್‌ ಸಂಪಾದಕ ಹಮೀದ್ ಇಕ್ಬಾಲ್ ಸಿದ್ದಿಕಿ ಅವರಿಗೆ ‘ಮಹಮ್ಮೂದ್‌ ಅಯಾಜ್‌ ಪ್ರಶಸ್ತಿ’, ಬೀದರ್‌ ಶಾಹೀನ್‌ ಕಾಲೇಜಿನ ಪ್ರಾಧ್ಯಾಪಕಿ ಶಾಯಿಸ್ತಾ ನಾಜ್‌ ಅವರಿಗೆ ‘ಉರೂಜ್‌–ಎ–ನಿಸಾ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ’ ಎಂದು ವಿವರಿಸಿದರು. 

ADVERTISEMENT

‘ಈ ಕಾರ್ಯಕ್ರಮದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ 800 ವಿವಿಧ ಶಾಲೆಗಳ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭಾಗವಹಿಸಲಿದ್ದಾರೆ. ಕೇಂದ್ರದ ಮಾಜಿ ಸಚಿವ ಕೆ. ರಹಮಾನ್‌ ಖಾನ್, ಸಚಿವ ಜಮೀರ್‌ ಅಹಮದ್ ಖಾನ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್, ವಿಧಾನ ಪರಿಷತ್‌ ಸದಸ್ಯೆ ಬಲ್ಕೀಸ್‌ ಬಾನು, ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷ ಮೌಲಾನಾ ಮಹಮ್ಮದ್ ಅಲಿ ಖಾಜಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.