ADVERTISEMENT

ಮೆಟ್ರೊ ಪ್ರಯಾಣ ದರ; ಅನವಶ್ಯ ಗೊಂದಲ ಸೃಷ್ಟಿ; ಸಚಿವ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 16:04 IST
Last Updated 8 ಫೆಬ್ರುವರಿ 2026, 16:04 IST
ವಿ.ಸೋಮಣ್ಣ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ
ವಿ.ಸೋಮಣ್ಣ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ   

ಹರಿಹರ (ದಾವಣಗೆರೆ): ‘ಮೆಟ್ರೊ ಪ್ರಯಾಣ ದರ ಏರಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಅನವಶ್ಯ ಗೊಂದಲ ಸೃಷ್ಟಿ ಮಾಡುತ್ತಿದೆ’ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ದೂರಿದರು. 

‘ಕಾಂಗ್ರೆಸ್‌ನವರು ಮೆಟ್ರೊ ಯೋಜನೆಯನ್ನು ವಿರೋಧಿಸಿದ್ದರು. ಬಿಳಿ ಆನೆ ಎಂದು ದೂರಿದ್ದರು. ಈಗ ನಿತ್ಯವೂ ಐದಾರು ಲಕ್ಷ ಜನ ಮೆಟ್ರೊದಲ್ಲಿ
ಪ್ರಯಾಣಿಸುತ್ತಿದ್ದಾರೆ. ರಾಜ್ಯ ಸರ್ಕಾರ ಪ್ರಯಾಣ ದರ ಏರಿಸಲು ಮುಂದಾಗಿತ್ತು. ಇದಕ್ಕೆ ಕೇಂದ್ರ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ. ತಾನು ಯಾವುದೇ ಆದೇಶ ಹೊರಡಿಸಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದೇಶ ಲಿಖಿತ ರೂಪದಲ್ಲಷ್ಟೇ ಇರುವುದಿಲ್ಲ. ಸಂಬಂಧಿಸಿದ ಅಧಿಕಾರಿಗಳು ಮೌಖಿಕವಾಗಿಯೂ ಹೇಳಿರುತ್ತಾರೆ’ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು. 

‘ನಿವೃತ್ತ ಅಧಿಕಾರಿಗಳನ್ನು ಕಟ್ಟಿಕೊಂಡು ರಾಜ್ಯ ಸರ್ಕಾರ ಆಡಿದ್ದೇ ಆಟವಾಗಿದೆ. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಏನೇನೋ ಹೇಳುತ್ತಿದ್ದಾರೆ. ಇದು ಒಳ್ಳೆಯದಲ್ಲ’ ಎಂದರು. 

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಾಹಯಕರಾಗಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಹಳಿ ತಪ್ಪಿದ್ದು, ಜನರ ಭಾವನೆಗೆ ಸ್ಪಂದಿಸುತ್ತಿಲ್ಲ’ ಎಂದರು.

'ಕೇಂದ್ರ- ರಾಜ್ಯ ಸೇರಿ ಮೆಟ್ರೊ ದರ ನಿರ್ಧಾರ'

ಬೆಂಗಳೂರು: ‘ಮೆಟ್ರೊ ದರ ಬಗ್ಗೆ ಪದೇ ಪದೇ ಗೊಂದಲ ಆಗುತ್ತದೆ. ಕೇಂದ್ರ, ರಾಜ್ಯ ಸೇರಿ ಮಾಡುವ ನಿರ್ಧಾರವಿದು. ಈಗ ದರ ಏರಿಕೆಗೆ ಕೇಂದ್ರ ತಡೆ ನೀಡಿದೆ. ಮುಂದೆ ಏನು ಮಾಡಬೇಕೆಂದು ಎರಡೂ ಕಡೆಯವರು ಚರ್ಚೆ ಆಗಿ ತೀರ್ಮಾನವಾಗುತ್ತದೆ. ದರ ನಿಗದಿ ಸಮಿತಿಗೆ ಸ್ವಾಯತ್ತತೆ ನೀಡಲಾಗಿದೆ’ ಎಂದು ಗೃಹ ಸಚಿವ ಪರಮೇಶ್ವರ ಹೇಳಿದರು.

 ಮೆಟ್ರೊ ಟಿಕೆಟ್ ದರ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.