ಕೆ.ಆರ್.ಪುರ: ವೈಕುಂಠ ಏಕಾದಶಿ ಪ್ರಯುಕ್ತ ಕೆ.ಆರ್.ಪುರದ ಪುರಾತನ ಕೋಟೆ ಶ್ರೀವೆಂಕಟರಮಣಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರಗಿದವು.
ಶ್ರೀಕೋಟೆ ವೆಂಕಟರಮಣಸ್ವಾಮಿಗೆ ಹಾಲು, ತುಪ್ಪ, ಹಣ್ಣಿನ ವಿವಿಧ ದ್ರವಗಳಿಂದ ಅಭಿಷೇಕ ಕವಚಧಾರಣಿ, ಮಹಾಮಂಗಳಾರತಿ ನಡೆಯಿತು. ದೇಗುಲಕ್ಕೆ ಪುಷ್ಪಾಲಂಕಾರ ಮಾಡಲಾಗಿತ್ತು.
ಕೆ.ಆರ್.ಪುರ, ಬಾಣಸವಾಡಿ, ಮಹದೇವಪುರ, ಬೈಯ್ಯಪ್ಪನಹಳ್ಳಿ, ಹೊಸಕೋಟೆ, ಹೆಣ್ಣೂರು, ಬೈರತಿ, ಕಸ್ತೂರಿನಗರ, ಸೇರಿ ವಿವಿಧೆಡೆಯ ಭಕ್ತರು ದೇವರ ದರ್ಶನ ಪಡೆದರು.
ದೇವಸ್ಥಾನದ ಆಡಳಿತ ಟ್ರಸ್ಟ್ ಮತ್ತು ಕೆ.ಆರ್.ಪುರ ಸಮಾನ ಮನಸ್ಕ ಗ್ರಾಮಸ್ಥರ ವತಿಯಿಂದ ಮೂವತ್ತು ಸಾವಿರ ಲಾಡು ಭಕ್ತರಿಗೆ ವಿತರಿಸಲಾಯಿತು.
ವೈಕುಂಠ ಏಕಾದಶಿಯ ಪ್ರಯುಕ್ತ ಚಿಕ್ಕಬಾಣಾವರದ ಹಳೆ ಗ್ರಾಮದ 600ವರ್ಷಗಳ ಇತಿಹಾಸವಿರುವ ಚನ್ನಕೇಶವ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಯಿತು.
ಬ್ಯಾಟರಾಯನಪುರ ಕ್ಷೇತ್ರದ ತರಬನಹಳ್ಳಿಯಲ್ಲಿರುವ ತಿರುಮಲ ದೇವರ ಸನ್ನಿಧಿಯಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಯಲಹಂಕ ಉಪನಗರದ ಶ್ರೀನಿವಾಸ ದೇವಸ್ಥಾನದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ, ಅಭಿಷೇಕ, ಅರ್ಚನೆ, ಮಹಾಮಂಗಳಾರತಿ ಸೇರಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.