ADVERTISEMENT

ವಜ್ರ ಬಸ್‌ ಪ್ರಯಾಣ ದರ ಹೆಚ್ಚಳ

ಇಂದಿನಿಂದ ಜಾರಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2018, 17:23 IST
Last Updated 30 ಜೂನ್ 2018, 17:23 IST

ಬೆಂಗಳೂರು: ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ವಜ್ರ ಬಸ್‌ಗಳ ಪ್ರಯಾಣ ದರವನ್ನು (7ನೇ ಹಂತದಿಂದ 25ರವರೆಗೆ) ಸರಾಸರಿ ಶೇ 16.89ರಷ್ಟು ಹೆಚ್ಚಿಸಿದೆ. ಜುಲೈ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

ಪ್ರಸಕ್ತ ವರ್ಷ ಜನವರಿ 1ರಿಂದ ಡೀಸೆಲ್‌ ಬೆಲೆಯಲ್ಲಿ ನಿರಂತರ ಹೆಚ್ಚಳವಾಗಿರುವುದು, ಇದೇ ಅವಧಿಯಲ್ಲಿ ನೌಕರರಿಗೆ ತುಟ್ಟಿಭತ್ಯೆಯಲ್ಲಿ ಹೆಚ್ಚಳ ಮಾಡಿರುವುದು ಇವೆಲ್ಲವೂ ಸಂಸ್ಥೆಯ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಿರುವುದರಿಂದ ಬಸ್‌ಗಳನ್ನು ನಿರ್ವಹಿಸುವುದು ಕಷ್ಟವಾಗುತ್ತಿದೆ. ಈ ಕಾರಣದಿಂದ ಪ್ರಯಾಣದರದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT