ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಗಳವರ 430ನೇ ವರ್ಧಂತಿ ಮಹೋತ್ಸವವು ಮಂತ್ರಾಲಯದ ಮಠದಲ್ಲಿ ಗುರುವಾರ ವಿಜೃಂಭಣೆಯಿಂದ ನೆರವೇರಿತು.
ಸುಬುಧೇಂದ್ರ ತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ರಾಯರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಮಹಾ ಆರತಿ ಬೆಳಗಲಾಯಿತು.
ರಾಯರ ರಥೋತ್ಸವಕ್ಕೆ ಸುಬುಧೇಂದ್ರ ತೀರ್ಥರು ಚಾಲನೆ ನೀಡಿದರು. ನಂತರ ದೀಪ ಪ್ರಜ್ವಲನ ಮಾಡುವ ಮೂಲಕ ‘ನಾದ ಹರಂ’ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಉತ್ಸವದ ಅಂಗವಾಗಿ ತಮಿಳುನಾಡಿನ ಅಂತರ ರಾಷ್ಟ್ರೀಯ ಕಲಾವಿದರೂ ಸೇರಿದಂತೆ ಖ್ಯಾತ ಸಂಗೀತ ಕಲಾವಿದರು ಭಕ್ತಿಯಿಂದ ನಾದ ನಮನ ಸೇವೆ ಸಲ್ಲಿಸಿದರು. ಶ್ರೀಗಳು ವೀಣೆ ನುಡಿಸಿದರು. ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.