ADVERTISEMENT

ಯಲಹಂಕ: ವೀರ ಸಾವರ್ಕರ್‌ ಜಯಂತ್ಯುತ್ಸವ 

​ಪ್ರಜಾವಾಣಿ ವಾರ್ತೆ
Published 28 ಮೇ 2025, 19:55 IST
Last Updated 28 ಮೇ 2025, 19:55 IST
ಯಲಹಂಕ ಬಿಜೆಪಿ ನಗರಮಂಡಲ ಹಾಗೂ ಸಂಘಪರಿವಾರದ ಸಹಯೋಗದಲ್ಲಿ ವೀರ ಸಾವರ್ಕರ್‌ ಅವರ 142ನೇ ಜಯಂತ್ಯುತ್ಸವ ಆಚರಿಸಲಾಯಿತು
ಯಲಹಂಕ ಬಿಜೆಪಿ ನಗರಮಂಡಲ ಹಾಗೂ ಸಂಘಪರಿವಾರದ ಸಹಯೋಗದಲ್ಲಿ ವೀರ ಸಾವರ್ಕರ್‌ ಅವರ 142ನೇ ಜಯಂತ್ಯುತ್ಸವ ಆಚರಿಸಲಾಯಿತು   

ಯಲಹಂಕ: ಬಿಜೆಪಿ ನಗರಮಂಡಲ ಹಾಗೂ ಸಂಘಪರಿವಾರದ ಸಹಯೋಗದೊಂದಿಗೆ ಶಾಸಕ ಎಸ್‌.ಆರ್‌. ವಿಶ್ವನಾಥ್‌ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಅವರ 142ನೇ ಜಯಂತ್ಯುತ್ಸವವನ್ನು ಉಪನಗರದಲ್ಲಿ ಬುಧವಾರ ಆಚರಿಸಲಾಯಿತು.

ವೀರಸಾವರ್ಕರ್‌ ಅವರ ಭಾವಚಿತ್ರವನ್ನು ರಥದಲ್ಲಿಟ್ಟು ಪೂಜೆ ನೆರವೇರಿದ ಬಳಿಕ ಜ್ಞಾನಜ್ಯೋತಿ ಕಾಲೇಜಿನಿಂದ ಆರಂಭವಾದ ಮೆರವಣಿಗೆಯು, ಚಿಕ್ಕಬೊಮ್ಮಸಂದ್ರ ಕ್ರಾಸ್‌ ಹಾಗೂ ಮದರ್‌ ಡೈರಿ ಕ್ರಾಸ್‌ ಮೂಲಕ ವೀರ ಸಾವರ್ಕರ್‌ ಮೇಲ್ಸೇತುವೆಯವರೆಗೆ ಸಾಗಿತು.

ಎಸ್‌.ಆರ್‌.ವಿಶ್ವನಾಥ್‌ ಮಾತನಾಡಿ, ‘ಬಾಲ್ಯದಲ್ಲಿಯೇ ಬಾಲಗಂಗಾಧರ ತಿಲಕ್ ಅವರ ಪ್ರೇರಣೆಯಿಂದ ಸ್ವಾತಂತ್ರ್ಯ ಹೋರಾಟದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಸಾವರ್ಕರ್‌ ಅವರು, ತಮ್ಮ ಕ್ರಾಂತಿಕಾರಿ ಹೋರಾಟದ ಮೂಲಕ ಬ್ರಿಟಿಷರನ್ನು ದೇಶದಿಂದ ತೊಲಗಿಸಲು ಮಾಡಿದ್ದ ಸಂಕಲ್ಪ ಸದಾ ಸ್ಫೂರ್ತಿಯಾಗಿದೆ’ ಎಂದರು.

ADVERTISEMENT

ಬಿಜೆಪಿ ಮುಖಂಡರಾದ ಎಸ್‌.ಎನ್‌.ರಾಜಣ್ಣ, ದಿಬ್ಬೂರು ಜಯಣ್ಣ, ಸತೀಶ್‌ ಕಡತನಮಲೆ, ಚೊಕ್ಕನಹಳ್ಳಿ ವೆಂಕಟೇಶ್‌, ಅಲೋಕ್‌ ವಿಶ್ವನಾಥ್‌, ಡಿ.ಜಿ.ಅಪ್ಪಯಣ್ಣ, ಈಶ್ವರ್‌, ಎಂ.ಮಂಜುನಾಥ್‌, ಎಂ.ಮುನಿರಾಜು, ಪವನ್‌ಕುಮಾರ್‌.ವಿ, ಮಧುಸೂದನ್‌, ಮುರಾರಿರಾಮು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.