ADVERTISEMENT

ವಿಧಾನಸೌಧದಲ್ಲಿ ಜನಸ್ಪಂದನ: ವಾಹನ ಸಂಚಾರ ನಿಷೇಧ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2024, 15:52 IST
Last Updated 7 ಫೆಬ್ರುವರಿ 2024, 15:52 IST
<div class="paragraphs"><p>ಸಂಗ್ರಹ ಚಿತ್ರ</p></div>

ಸಂಗ್ರಹ ಚಿತ್ರ

   

ಬೆಂಗಳೂರು: ವಿಧಾನಸೌಧದಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿಧಾನಸೌಧ ಆವರಣದ ಕೆಂಗಲ್‌ ಹನುಮಂತಯ್ಯ ವೃತ್ತದಿಂದ ಗೇಟ್‌ ನಂಬರ್‌ 4ರ ವರೆಗೆ ಫೆ.8ರಂದು ವಾಹನ ಸಂಚಾರ ನಿಷೇಧಿಸಲಾಗಿದೆ.

ಪರ್ಯಾಯ ಮಾರ್ಗವಾಗಿ ಡಿ.ದೇವರಾಜ ಅರಸು ರಸ್ತೆಯಲ್ಲಿ ಬರುವ ವಾಹನಗಳು ಎಜಿಎಸ್ ವೃತ್ತದ ಮೂಲಕ ಎಂಎಸ್ ಬಿಲ್ಡಿಂಗ್‌ ಒಳಭಾಗದಿಂದ ಪ್ರವೇಶಿಸಿ, ಡಾ.ಬಿ.ಆರ್‌.ಅಂಬೇಡ್ಕರ್‌ ರಸ್ತೆಯಲ್ಲಿ ಎಡಕ್ಕೆ ತಿರುವು ಪಡೆದುಕೊಂಡು ಸಂಚರಿಸಬಹುದು.

ADVERTISEMENT

ಚಾಲುಕ್ಯ ವೃತ್ತದಿಂದ ಬರುವ ವಾಹನಗಳು ಸಿಐಡಿ ಕಚೇರಿ ಮುಂಭಾಗವಾಗಿ ಚಲಿಸಿ ಮಹಾರಾಣಿ ಕಾಲೇಜು, ಅಪ್ಸರ್‌ ರ್‍ಯಾಂಪ್‌ ಮಾರ್ಗವಾಗಿ ಎಡಕ್ಕೆ ತಿರುವು ಪಡೆದು ಕೆ.ಆರ್‌.ವೃತ್ತದಿಂದ ಅಂಬೇಡ್ಕರ್‌ ವೀದಿ, ಸಿಟಿ ಸಿವಿಲ್‌ ಕೋರ್ಟ್‌ ರಸ್ತೆಯನ್ನು ಬಳಕೆ ಮಾಡಬಹುದು.

8ರಂದು ಬೆಳಿಗ್ಗೆ 6ರಿಂದ ರಾತ್ರಿ 7ರ ವರೆಗೆ ಬಿ.ಆರ್‌.ಅಂಬೇಡ್ಕರ್ ರಸ್ತೆ, ರಾಜಭವನ ರಸ್ತೆ, ಪ್ಯಾಲೆಸ್ ರಸ್ತೆ, ಶೇಷಾದ್ರಿ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಕಾರ್ಯಕ್ರಮ ನಡೆಯುವ ದಿನದಿಂದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಪಾರ್ಕಿಂಗ್ ಸ್ಥಳ, ಜ್ಞಾನ ಜ್ಯೊತಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಪಾರ್ಕಿಂಗ್‌ ಸ್ಥಳ, ಸೆಂಟ್ರಲ್‌ ಕಾಲೇಜು, ಸ್ವಾತಂತ್ರ್ಯ ಉದ್ಯಾನ, ಅರಮನೆ ಮೈದಾನ ಪಾರ್ಕಿಂಗ್‌ ಸ್ಥಳದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.