ADVERTISEMENT

3ನೇ ಅಲೆ ಎದುರಿಸಲು ಸಜ್ಜಾಗಿ: ವಿನಯ್‌ ಗುರೂಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 18:50 IST
Last Updated 20 ಜೂನ್ 2021, 18:50 IST

ಬೆಂಗಳೂರು: ಕೋವಿಡ್‌ ಮೂರನೇ ಅಲೆ ಎದುರಿಸಲು ಸಜ್ಜಾಗುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಚಿಕ್ಕಮಗಳೂರು ಸಮೀಪದ ಗೌರಿಗದ್ದೆಯ ವಿನಯ್ ಗುರೂಜಿ ಸಲಹೆ ನೀಡಿದ್ದಾರೆ.

ಮುಖ್ಯಮಂತ್ರಿಯ ನಿವಾಸ ‘ಕಾವೇರಿ’ಗೆ ಭಾನುವಾರ ಬೆಳಿಗ್ಗೆ ಬಂದ ವಿನಯ್ ಗುರೂಜಿ, ‘ತಜ್ಞರು ಸಲಹೆ ಕೊಟ್ಟಂತೆ ಮೂರನೇ ಅಲೆ ಕೂಡ ಬರುತ್ತಿದೆ. ಅದರ ಬಗ್ಗೆ ನಿರ್ಲಕ್ಷ್ಯ ಬೇಡ. ಈಗಿನಿಂದಲೇ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ’ ಎಂದರು.

‘ಆಸ್ಪತ್ರೆಗಳಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಬೇಕು. ಕೊಪ್ಪ, ಬಾಳೆಹೊನ್ನೂರು ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ವಿಶೇಷ ಆಸ್ಪತ್ರೆಗಳಿದ್ದರೆ ಅನುಕೂಲ’ ಎಂದರು.

ADVERTISEMENT

ಅಂತರ್ಜಲ ಮಟ್ಟ ಹೆಚ್ಚಿಸಬೇಕು: ಅಂತರ್ಜಲ ಮಟ್ಟ ಹೆಚ್ಚಿಸುವ ಬಗ್ಗೆಯೂ ಮುಖ್ಯಮಂತ್ರಿ ಜೊತೆ ಚರ್ಚಿಸಿದ ಗುರೂಜಿ, ‘ಮಲೆನಾಡು ಸೇರಿದಂತೆ ಎಲ್ಲೆಡೆ ಅಂತರ್ಜಲಮಟ್ಟ ಕುಸಿಯುತ್ತಿದೆ. ಹೀಗಾಗಿ ನೀಲಗಿರಿ, ಅಕೇಶಿಯಾ ಗಿಡಗಳನ್ನು ತೆರವುಗೊಳಿಸಿ, ಹಣ್ಣಿನ ಗಿಡ ಬೆಳೆಸಬೇಕು. ಇದರಿಂದ ಪಶುಪಕ್ಷಿಗಳಿಗೆ ಹಣ್ಣು ಸಿಗಲಿದೆ. ಅಂತರ್ಜಲ ಮಟ್ಟ ಕೂಡ ಹೆಚ್ಚಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.