ADVERTISEMENT

ನಟ ವಿಷ್ಣುವರ್ಧನ್‌ ಸಮಾಧಿ ತೆರವು: ನ್ಯಾಯಾಂಗ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 18:03 IST
Last Updated 13 ಆಗಸ್ಟ್ 2025, 18:03 IST

ನಟ ವಿಷ್ಣುವರ್ಧನ್ ಸಮಾಧಿ ನೆಲಸಮಕ್ಕೆ ಮೊದಲು ಮತ್ತು ನಂತರ

ನಟ ವಿಷ್ಣುವರ್ಧನ್ ಸಮಾಧಿ ನೆಲಸಮಕ್ಕೆ ಮೊದಲು ಮತ್ತು ನಂತರ

ADVERTISEMENT

ಬೆಂಗಳೂರು: ‘ನಟ ವಿಷ್ಣುವರ್ಧನ್‌ ಅವರ ಪುಣ್ಯಭೂಮಿ ನೆಲಸಮ ಆಗಿದ್ದು, ನಮ್ಮ ಹೃದಯಕ್ಕೆ ಚೂರಿ ಹಾಕಿದಂತಾಗಿದೆ. ದೂರ್ತರ ಹಾಗೆ ವರ್ತಿಸಿರುವುದನ್ನು ನೋಡಿದರೆ ಇದರ ಹಿಂದಿನ ಮರ್ಮಗಳನ್ನು ಕನ್ನಡಿಗರು ತಿಳಿಯುವುದು ಅಗತ್ಯ. ಸ್ಟುಡಿಯೊಗೆ ಕೊಟ್ಟ ಜಾಗವನ್ನು ಲೇಔಟ್‌ ಮಾಡಿದ್ದು ಹೇಗೆ’ ಎಂದು ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್‌ ಬಾಬು ಪ್ರಶ್ನಿಸಿದ್ದಾರೆ.

‘ಸಮಾಧಿ ತೆರವು ಮಾಡಿರುವ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಇದರ ಹಿಂದೆ ಕೆಲವು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಬಾಲಕೃಷ್ಣ ಕುಟುಂಬದವರು ಭಾಗಿ ಆಗಿರುವ ಶಂಕೆಯಿದೆ. ಅಭಿಮಾನ್‌ ಸ್ಟುಡಿಯೊದಲ್ಲಿ ಬೇರಾವುದೇ ಚಟುವಟಿಕೆ ನಡೆಯದಂತೆ ರಾಜ್ಯ ಸರ್ಕಾರವು ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.