ಬೆಂಗಳೂರು: ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ (ವಿಐಟಿಇಇಇ) ಫಲಿತಾಂಶ ಪ್ರಕಟವಾಗಿದೆ. ಒಂದು ಲಕ್ಷ ಶ್ರೇಣಿಯೊಳಗಿನ ಅರ್ಜಿದಾರರು ಬಿ.ಟೆಕ್ ಪ್ರವೇಶಕ್ಕಾಗಿ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ಬಿ.ಟೆಕ್ ಪ್ರವೇಶಕ್ಕಾಗಿ ಏಪ್ರಿಲ್ 19ರಿಂದ 30ರವರೆಗೆ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯನ್ನು ವಿಐಟಿ ವೆಲ್ಲೂರು, ವಿಐಟಿ ಚೆನ್ನೈ, ವಿಐಟಿ ಆಂಧ್ರಪ್ರದೇಶ ಮತ್ತು ವಿಐಟಿ ಭೋಪಾಲ್‌ಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಂಪ್ಯೂಟರ್ ಆಧಾರಿತ ಈ ಪರೀಕ್ಷೆಯು ಭಾರತದ 125 ನಗರಗಳಲ್ಲಿ ಮತ್ತು ವಿದೇಶದ ಆರು ನಗರಗಳಾದ ದುಬೈ, ಕುವೈತ್, ಮಸ್ಕತ್, ಕತಾರ್, ಕೌಲಾಲಂಪುರ, ಸಿಂಗಾಪುರಗಳನ್ನು ನಡೆಸಲಾಗಿತ್ತು. ಭಾರತದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅರ್ಜಿದಾರರು ಭಾಗವಹಿಸಿದ್ದರು. ಫಲಿತಾಂಶ https://ugresults.vit.ac.in/viteee ಪೋರ್ಟಲ್, ವೆಬ್‌ಸೈಟ್ www.vit.ac.in ನಲ್ಲಿ ಲಭ್ಯವಿದೆ.
ವಿವಿಧ 3 ವರ್ಷಗಳ ಪದವಿಪೂರ್ವ ತರಗತಿಗಳಿಗೆ ಅರ್ಜಿಗಳು, 4 ವರ್ಷಗಳ ಬಿ.ಎಸ್‌ಸಿ, ಗೌರವಾನ್ವಿತ (ಕೃಷಿ), ಬಿ.ಆರ್ಚ್, ಬಿ.ಡಿಇಎಸ್(ಇಂಡಸ್ಟ್ರಿಯಲ್ ಡಿಸೈನ್) ಮತ್ತು 5 ವರ್ಷಗಳ ಸಂಯೋಜಿತ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸಬಹುದು. ವಿವರಗಳಿಗಾಗಿ ವಿಐಟಿ ವೆಬ್‌ಸೈಟ್ ‘www.vit.ac.in’ಗೆ ಭೇಟಿ ನೀಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.