ADVERTISEMENT

ಹಿರಿಯ ನಾಗರಿಕರಿಗೆ ಜೀವಮಾನದ ಸಾಧನೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 9 ಮೇ 2022, 19:47 IST
Last Updated 9 ಮೇ 2022, 19:47 IST
ಬನ್ನೇರುಘಟ್ಟ ಸಮೀಪದ ನಿಸರ್ಗ ಬಡಾವಣೆಯಲ್ಲಿ ನಡೆದ ವಿಎಲ್‍ಎನ್ ನವನಿರ್ಮಾಣ್ ಪ್ರಬುದ್ಧಾಲಯದ 14ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ರೇವತಿ ಎಂ. ಕಲಂಬಿ, ಡಾ. ಎನ್. ಅಪ್ಪಾಜಿರಾವ್, ಡಾ. ವಾಣಿರಾವ್, ಡಾ. ಸಿ.ಆರ್. ಶಾಮಲಾ ಮತ್ತು ಎನ್. ಶ್ರೀನಿವಾಸಮೂರ್ತಿ ಅವರಿಗೆ ವಿಎಲ್‍ಎನ್ ಹಿರಿಯ ನಾಗರಿಕರ ಜೀವಮಾನದ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿರ್ಮಾಣ್ ಸಂಸ್ಥೆಯ ಸಂಸ್ಥಾಪಕ ವಿ. ಲಕ್ಷ್ಮೀನಾರಾಯಣ್, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ, ಹೈಕೋರ್ಟ್‌ ಹಿರಿಯ ವಕೀಲ ಎಸ್.ಎಂ. ಪಾಟೀಲ್ ಇದ್ದರು.

ಬೆಂಗಳೂರು: 'ಅವಿಭಕ್ತ ಕುಟುಂಬಗಳ ಸಂಖ್ಯೆ ಕುಸಿಯುತ್ತಿರುವುದು ಸಮಾಜದ ಹಿತದೃಷ್ಟಿಯಿಂದ ಅನಾರೋಗ್ಯಕರ ಸಂಗತಿ’ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಕಳವಳ ವ್ಯಕ್ತಪಡಿಸಿದರು.

ಬನ್ನೇರುಘಟ್ಟ ಸಮೀಪದ ನಿಸರ್ಗ ಬಡಾವಣೆಯಲ್ಲಿ ನಡೆದ ವಿಎಲ್‍ಎನ್ ನವನಿರ್ಮಾಣ್ ಪ್ರಬುದ್ಧಾಲಯದ 14ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಐವರು ಹಿರಿಯ ನಾಗರಿಕರಿಗೆ ‘ವಿಎಲ್‍ಎನ್ ಹಿರಿಯ ನಾಗರಿಕರ ಜೀವಮಾನದ ಸಾಧನೆ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ವಿತರಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.