ಬೆಂಗಳೂರು: ನಗರದ ವಿಶ್ವಾಸ್ ಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ರೂಪಿಸಿರುವ ವಿ–ಪೇ ಆ್ಯಪ್ ಮತ್ತು ವಿ–ಕಾರ್ಡ್ ಅನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಬುಧವಾರ ಬಿಡುಗಡೆಗೊಳಿಸಿದರು.
ರೈತರು, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ಈ ಆ್ಯಪ್‌ಅಭಿವೃದ್ದಿಪಡಿಸಲಾಗಿದೆ. ವಿ ಪೇ- ಆಪ್ ಮುಖಾಂತರ ಹಣ ವರ್ಗಾವಣೆ, ಎಲ್ಲ ರೀತಿಯ ಮೊಬೈಲ್ ರಿಚಾರ್ಜ್, ಡಿಶ್ ರಿಚಾರ್ಜ್, ವಿದ್ಯುತ್ ಶುಲ್ಕವನ್ನು ಪಾವತಿ ಮಾಡಬಹುದಾಗಿದೆ.
ವಿ-ಕಾರ್ಡ್ ಮೂಲಕ ಗ್ರಾಹಕರು ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಬಹುದು. ಸದಸ್ಯತ್ವ ಪಡೆದುಕೊಂಡವರಿಗೆ ಸಂಸ್ಥೆಯಿಂದ ₹1 ಸಾವಿರದಿಂದ ₹10 ಸಾವಿರದವರೆಗೆ ಕಡಿಮೆ ಬಡ್ಡಿ ದರದಲ್ಲಿ 24 ಗಂಟೆಯೊಳಗೆ ಸಾಲ ಸೌಲಭ್ಯ ನೀಡಲಾಗುತ್ತದೆ.
ಮಾಹಿತಿಗೆ: 1800 212 4665.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.