ADVERTISEMENT

ಬಾಕಿ ಬಿಲ್‌ ಆದ್ಯತೆ ಮೇರೆಗೆ ಪಾವತಿ: ಕರೀಗೌಡ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 23:30 IST
Last Updated 23 ಸೆಪ್ಟೆಂಬರ್ 2025, 23:30 IST
<div class="paragraphs"><p>ಹಣ </p></div>

ಹಣ

   

ಬೆಂಗಳೂರು: ‘ತ್ಯಾಜ್ಯ ಗುತ್ತಿಗೆದಾರರ ಬಾಕಿ ಬಿಲ್‌ಗಳನ್ನು ಆದ್ಯತೆ ಮೇರೆಗೆ ಪಾವತಿಸಲಾಗುವುದು’ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ ಮಂಗಳವಾರ ಹೇಳಿದರು. 

ತ್ಯಾಜ್ಯ ಗುತ್ತಿಗೆದಾರರೊಂದಿಗೆ ನಡೆದ ಸಂಧಾನ ಸಭೆಯ ನಂತರ ಮಾತನಾಡಿ, ‘ತಿಂಗಳಿಗೊಮ್ಮೆ ಎಲ್ಲಾ ಸೇವಾ ಪೂರೈಕೆ ದಾರರೊಂದಿಗೆ ಸಭೆ ನಡೆಸಲಾಗುವುದು. ಇತರೆ ಎಲ್ಲ ಬೇಡಿಕೆ ಪರಿಶೀಲಿಸಿ,
ಈಡೇರಿಸಲಾಗುವುದು. ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆಗೆ ಸಂಬಂಧಿಸಿದಂತೆ ಬಿಲ್‌ಗಳ ಪಾವತಿಯನ್ನು ಸರಳೀಕರಿಸುವುದು, ಇಎಸ್ಐ ಮತ್ತು ಪಿಎಫ್ ಬಾಕಿಯಿದ್ದಲ್ಲಿ, ಕೂಡಲೇ ಪಾವತಿಸಲು ಕ್ರಮ
ಕೈಗೊಳ್ಳಲಾಗುವುದು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.