ADVERTISEMENT

91 ಮನೆಗಳ ಅನಧಿಕೃತ ನೀರು ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 5:48 IST
Last Updated 24 ಜೂನ್ 2021, 5:48 IST

ಬೆಂಗಳೂರು: ಅನಧಿಕೃತವಾಗಿ ನೀರು ಪಡೆಯುತ್ತಿದ್ದ 91 ಮನೆಗಳ ಸಂಪರ್ಕಗಳನ್ನು ಜಲಮಂಡಳಿಯು ಕಡಿತಗೊಳಿಸಿದೆ. ಅಲ್ಲದೆ, ದಂಡವನ್ನೂ ವಿಧಿಸಲಾಗಿದೆ.

ಮಾಪಕದ (ಮೀಟರ್‌) ನೀರು ಹರಿಯುವಿಕೆಯನ್ನು ತಪ್ಪಿಸಿ, ಅನ್ಯ ಮಾರ್ಗದ ಮೂಲಕ ಸಂಪರ್ಕ ಪಡೆಯಲಾಗಿತ್ತು. ಗ್ರಾಹಕರ ಮಾಸಿಕ ನೀರಿನ ಬೇಡಿಕೆಯನ್ನು ಆಧರಿಸಿ, ಪರಿಶೀಲನೆ ನಡೆಸಿದಾಗ ಬಳಸಿದ ನೀರಿಗೂ, ಮೀಟರ್‌ನಲ್ಲಿ ದಾಖಲಾದ ನೀರಿನ ಪ್ರಮಾಣಕ್ಕೂ ವ್ಯತ್ಯಾಸವಿರುವುದು ಕಂಡು ಬಂದಿತ್ತು ಎಂದು ಜಲಮಂಡಳಿ ಹೇಳಿದೆ. ‌

ಪೂರ್ವ ವಲಯದಲ್ಲಿ 41 ಹಾಗೂ ಪಶ್ಚಿಮ ವಲಯದಲ್ಲಿ 50 ಇಂತಹ ಪ್ರಕರಣಗಳು ಪತ್ತೆಯಾಗಿವೆ. ಮಾಪಕದ ಮೂಲಕ ನೀರು ಹರಿಯುವುದನ್ನು ತಪ್ಪಿಸಿ, ಸಂಪರ್ಕ ಪಡೆಯುವುದು ಕಾನೂನುಬಾಹಿರ. ಗ್ರಾಹಕರು ಈ ಪ್ರಯತ್ನ ಮಾಡಬಾರದು ಎಂದೂ ಮಂಡಳಿ ಎಚ್ಚರಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.