ADVERTISEMENT

ಬೆಂಗಳೂರು: ಶಾಲೆಗಳಿಗೂ ತಟ್ಟಿದ ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 19:08 IST
Last Updated 8 ಮಾರ್ಚ್ 2024, 19:08 IST
   

ಬೆಂಗಳೂರು: ನೀರಿನ ಸಮಸ್ಯೆ ನಗರದ ಶಾಲೆಗಳಿಗೂ ತಟ್ಟಿದ್ದು, ಶೌಚಾಲಯಗಳ ಸ್ವಚ್ಛತೆಗೂ ಸಮಸ್ಯೆಯಾಗಿದೆ.

ಕೊಳವೆಬಾವಿಗಳು ಬತ್ತಿದ್ದು, ಬೇಡಿಕೆ ಹೆಚ್ಚಿರುವ ಕಾರಣ ಖಾಸಗಿ ನೀರಿನ ಟ್ಯಾಂಕರ್‌ಗಳು ಸಿಗುತ್ತಿಲ್ಲ. 800ರಿಂದ 1000 ವಿದ್ಯಾರ್ಥಿಗಳ ಸಾಮರ್ಥ್ಯವಿರುವ ಶಾಲೆಗೆ ದಿನಕ್ಕೆ ಸುಮಾರು 5 ಸಾವಿರ ಲೀಟರ್‌ ನೀರು ಬೇಕಾಗುತ್ತದೆ. ಹಲವು ಶಾಲೆಗಳಲ್ಲಿ ಮಳೆ ನೀರು ಸಂಗ್ರಹದ ವ್ಯವಸ್ಥೆ ಇದ್ದರೂ ಈ ಬಾರಿ ಮಳೆ ಕೊರತೆಯ ಕಾರಣ ಅಗತ್ಯ ನೀರಿನ ಸಂಗ್ರಹವಿಲ್ಲ. ಹಾಗಾಗಿ, ಅಗತ್ಯ ನೀರು ಪೂರೈಸುವಂತೆ ಖಾಸಗಿ ಶಾಲೆಗಳ ಸಂಘಟನೆಗಳು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಮನವಿ ಮಾಡಿವೆ.

ಬಹುತೇಕ ಮಕ್ಕಳು ಮನೆಯಿಂದಲೇ ಕುಡಿಯುವ ನೀರು ತರುತ್ತಾರೆ. ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ನೈರ್ಮಲ್ಯ ಕಾಪಾಡಿಕೊಳ್ಳಲು ಹೆಚ್ಚುವರಿ ನೀರಿನ ಅಗತ್ಯವಿದೆ ಎಂದು ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.