ADVERTISEMENT

ಬೆಂಗಳೂರು: 8ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 19:27 IST
Last Updated 6 ಜುಲೈ 2020, 19:27 IST

ಬೆಂಗಳೂರು: ಕೊಳವೆ, ವಾಲ್ವ್‌ ಹಾಗೂ ಮೀಟರ್‌ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶದಲ್ಲಿ ಬುಧವಾರ (ಜುಲೈ 8) ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಹೇಳಿದೆ.

ವ್ಯತ್ಯಯವಾಗುವ ಪ್ರದೇಶಗಳು:ಯಶವಂತಪುರ, ಬಾಷ್ಯಂ ಉದ್ಯಾನ, ಮಲ್ಲೇಶ್ವರ, ಶೇಷಾದ್ರಿಪುರ, ಓಕಳಿಪುರ, ಶ್ರೀರಾಂಪುರ, ಮತ್ತಿಕೆರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಸದಾಶಿವನಗರ, ಕೆ.ಜಿ.ಟವರ್, ಜಯಮಹಲ್, ಪ್ಯಾಲೇಸ್ ಗುಟ್ಟಹಳ್ಳಿ, ರಾಜ್‌ಮಹಲ್ ವಿಲಾಸ್ 2ನೇ ಹಂತ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಆರ್.ಟಿ. ನಗರ, ಹೆಬ್ಬಾಳ, ದಿಣ್ಣೂರು, ಸಂಜಯನಗರ, ಮನೋರಾಯನಪಾಳ್ಯ, ಗಂಗಾನಗರ, ಚಿಕ್ಕಪೇಟೆ, ಕೆ.ಆರ್.ಮಾರುಕಟ್ಟೆ, ಕಬ್ಬನ್ ಪೇಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳು.

ADVERTISEMENT

ಧರ್ಮರಾಯ ಸ್ವಾಮಿ ದೇವಸ್ಥಾನ, ಅವೆನ್ಯೂ ರಸ್ತೆ, ಮೆಜೆಸ್ಟಿಕ್ ಪ್ರದೇಶ, ಕಸ್ತೂರಿನಗರ, ಶಿವಾಜಿನಗರ, ಫ್ರೇಜರ್ ಟೌನ್, ಭಾರತಿ ನಗರ, ಸಂಪಂಗಿ ರಾಮನಗರ, ಆನಂದರಾವ್ ವೃತ್ತ, ಕೋಲ್ಸ್‌ಪಾರ್ಕ್, ಪುಲಿಕೇಶಿನಗರ, ಮಚಲೀಬೆಟ್ಟ, ಭಾರತಿ ನಗರ, ಕಾಕ್‌ಸ್ಟೋನ್, ಡಿ.ಜೆ.ಹಳ್ಳಿ, ವಸಂತನಗರ, ಮಾರುತಿ ಸೇವಾನಗರ, ವಿಧಾನಸೌಧ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳು.

ಜೀವನ್ ಬಿಮಾನಗರ, ಐಟಿಐ ಕಾಲೊನಿ, ಇಂದಿರಾನಗರ, ಲಕ್ಷ್ಮೀಪುರ, ಶಾಂತಿನಗರ, ಆಂಧ್ರ ಕಾಲೊನಿ, ಕಲ್ಲಹಳ್ಳಿ, ಎಚ್‌ಎಎಲ್ 3ನೇ ಹಂತ, ತಿಪ್ಪಸಂದ್ರ, ಎಲ್‌ಐಸಿ ಕಾಲೊನಿ, ಆನಂದಪುರ, ಸುಧಾಮನಗರ ಮತ್ತು ಸುತ್ತಮುತ್ತಲ ಪ್ರದೇಶಗಳು.

ಹಲಸೂರು, ಎಂ.ಜಿ.ರಸ್ತೆ, ಹೊಯ್ಸಳ ನಗರ, ಕೇಂಬ್ರಿಡ್ಜ್‌ ಬಡಾವಣೆ, ಎಂ.ವಿ.ಗಾರ್ಡನ್, ಡಿಕನ್ಸನ್ ರಸ್ತೆ, ಗೌತಮಪುರ, ಜಯರಾಜನಗರ, ದೊಮ್ಮಲೂರು, ಹನುಮಂತನಗರ, ಶ್ರೀನಗರ, ಗಿರಿನಗರ, ಅವಲಹಳ್ಳಿ, ಮುನೇಶ್ವರ ಬಡಾವಣೆ, ಟೆಲಿಕಾಂ ಬಡಾವಣೆ, ಚಾಮರಾಜಪೇಟೆ, ಆಜಾದ್ ‌ನಗರ, ವಿಠಲ ನಗರ, ಚಲವಾದಿಪಾಳ್ಯ, ರಾಘವೇಂದ್ರ ಬ್ಲಾಕ್, ಕಾಳಿದಾಸ ಬಡಾವಣೆ, ಬ್ಯಾಟರಾಯನಪುರ, ಗವಿಪುರ, ಲಕ್ಷ್ಮೀಪುರ, ಬಸಪ್ಪ ಬಡಾವಣೆ ಮತ್ತು ಸುತ್ತಮುತ್ತಲ ಪ್ರದೇಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.