ADVERTISEMENT

ಭಾವೈಕ್ಯ ಸಾರಿದ ವಿವಾಹ

ವೈವಾಹಿಕ ಜೀವನಕ್ಕೆ ಕಾಲಿಟ್ಟ 10 ಹಿಂದೂ ಜೋಡಿ, 90 ಮುಸ್ಲಿಂ ಜೋಡಿ

ರವಿ ಎಂ.ಹುಲಕುಂದ
Published 21 ಫೆಬ್ರುವರಿ 2020, 22:50 IST
Last Updated 21 ಫೆಬ್ರುವರಿ 2020, 22:50 IST
ಬೈಲಹೊಂಗಲ ಮದರಸಾ ಆವರಣದಲ್ಲಿ ಶುಕ್ರವಾರ ಹಿಂದೂ–ಮುಸ್ಲಿಂ ಸರ್ವಧರ್ಮ ಸಾಮೂಹಿಕ ವಿವಾಹ ನೆರವೇರಿತು
ಬೈಲಹೊಂಗಲ ಮದರಸಾ ಆವರಣದಲ್ಲಿ ಶುಕ್ರವಾರ ಹಿಂದೂ–ಮುಸ್ಲಿಂ ಸರ್ವಧರ್ಮ ಸಾಮೂಹಿಕ ವಿವಾಹ ನೆರವೇರಿತು   

ಬೈಲಹೊಂಗಲ: ಪಟ್ಟಣದ ಮದರಸಾದಲ್ಲಿ ಶುಕ್ರವಾರ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ನೇರವೇರಿಸಿ, ಭಾವೈಕ್ಯ ಮೆರೆಯಲಾಗಿದೆ.

ಬೈಲವಾಡ ಕ್ರಾಸ್ ಹತ್ತಿರದ ಮದರಸಾ ಎ ಅರೆಬಿಯಾ ಅನ್ವರೂಲ್ ಉಲೂಂ ಆವರಣದಲ್ಲಿ ಇಸ್ಸಾ ಫೌಂಡೇಷನ್ ಜಾಮಿಯಾ ಫೈಜಾನುಲ್ ಕುರಾನ್ ಅಹ್ಮದಾಬಾದ್ ಹಾಗೂ ಇಸ್ಲಾಮಿಯಾ ಸೋಶಿಯಲ್ ವೆಲ್‌ಫೇರ್‌, ಎಜುಕೇಷನಲ್‌ ಸೊಸೈಟಿ ವತಿಯಿಂದ ಶುಕ್ರವಾರ 10 ಹಿಂದೂ ಜೋಡಿ, 90 ಮುಸ್ಲಿಂ ಜೋಡಿಗಳು ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ಬಾಳ ಸಂಗಾತಿಗಳಾದರು.

‘ಒಂದಾಗಿ ಬಾಳಿರಿ, ವಿಶ್ವ ಶಾಂತಿನೆಲೆಸಿರಿ’ ಎಂಬ ವ್ಯಾಖ್ಯಾನ ಬೃಹತ್ವೇದಿಕೆಯಲ್ಲಿ ಕಂಗೊಳಿಸುತ್ತಿತ್ತು.ಹಲವಾರು ಮಠಾಧೀಶರು, ಮುಸ್ಲಿಂ ಧರ್ಮಗುರುಗಳು ಪಾಲ್ಗೊಂಡು ನವವಧು–ವರರನ್ನು ಆಶೀರ್ವದಿಸಿದರು.ಹಿಂದೂ ವಧು–ವರರಿಗೆ ಸ್ವಾಮೀಜಿಗಳು,
ಮುಸ್ಲಿಂ ವಧು–ವರರಿಗೆ ಮುಸ್ಲಿಂ ಧರ್ಮಗುರುಗಳು ಮದುವೆ ಮಾಡಿಸಿದರು.

ADVERTISEMENT

₹ 70 ಸಾವಿರ ಮೌಲ್ಯದ ಸಾಮಗ್ರಿ ವಿತರಣೆ: ವಿವಾಹ ಬಂಧನಕ್ಕೆ ಒಳಪಟ್ಟ ಪ್ರತಿ ಜೋಡಿಗೆ ಇಸ್ಸಾ ಫೌಂಡೇಷನ್ ವತಿಯಿಂದ ₹ 70 ಸಾವಿರ ಮೌಲ್ಯದ ಗೃಹೋಪಯೋಗಿ ವಸ್ತುಗಳ ಜೊತೆಗೆಹಿಂದೂ ವಧು–ವರರಿಗೆ ಭಗವದ್ಗೀತೆ, ಮುಸ್ಲಿಂ ವಧು–ವರರಿಗೆ ಕುರಾನ್ ವಿತರಿಸಲಾಯಿತು.

ಸಸ್ಯಾಹಾರಿ ಊಟ: ಮದುವೆಗೆ ಬಂದವರಿಗೆ ಸಸ್ಯಾಹಾರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ತಾಲ್ಲೂಕಿನ ವಿವಿಧ ಹಿಂದೂ–ಮುಸ್ಲಿಂ ಯುವಕ ಸಂಘಗಳ ಕಾರ್ಯಕರ್ತರು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.