ADVERTISEMENT

ಹೊಸ ಸಂಸತ್ ಭವನ ಭೂಮಿಪೂಜೆಗೆ ರಾಷ್ಟ್ರಪತಿ ಎಲ್ಲಿ?

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 20:19 IST
Last Updated 12 ಡಿಸೆಂಬರ್ 2020, 20:19 IST

ಬೆಂಗಳೂರು: ಹೊಸ ಸಂಸತ್ ಭವನ ನಿರ್ಮಾಣಕ್ಕಾಗಿ ನಡೆದ ಭೂಮಿ ಪೂಜಾ ಕಾರ್ಯಕ್ರಮ
ದಲ್ಲಿ ರಾಷ್ಟ್ರಪತಿಗಳ ಉಪಸ್ಥಿತಿ ಅಗತ್ಯವಿತ್ತಲ್ಲವೇ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್ ಪ್ರಶ್ನಿಸಿದ್ದಾರೆ.

‘21 ನೇ ಶತಮಾನದ ನವಭಾರತಕ್ಕೆ ಅಗತ್ಯವಾದ ಸ್ವಾವಲಂಬನೆಯ ಭವ್ಯ ಸೌಧ. ಇದು ನಮ್ಮ ಪ್ರಜಾಪ್ರಭುತ್ವದ ದೀಪಸ್ತಂಭ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು, ವರ್ಣರಂಜಿತವಾಗಿ ಬಣ್ಣಿಸಿದ್ದಾರೆ. ಹೋಮ ಹವನ ನೆರವೇರಿಸಿ ವಿಧ್ಯುಕ್ತವಾಗಿ ಶಿಲಾನ್ಯಾಸವನ್ನೂ ನೆರವೇರಿಸಿದ್ದಾರೆ. ಇಷ್ಟು ಪ್ರಮುಖವಾದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳ ಉಪಸ್ಥಿತಿ ಏಕಿರಲಿಲ್ಲ’ ಎಂದು ಕೇಳಿದ್ದಾರೆ.

‘ಸಂಸದೀಯ ಪ್ರಜಾಪ್ರಭುತ್ವದಲ್ಲಿ ಒಂದು ಕಟ್ಟಡಕ್ಕಿಂತ ರಾಷ್ಟ್ರಪತಿಯವರು ‘ಪ್ರಜಾಪ್ರಭುತ್ವದ ದೀಪಸ್ತಂಭ’ ಎನ್ನುವುದು ತಾತ್ವಿಕವಾಗಿಯಾದರೂ ಸ್ವೀಕರಿಸುವ ವಿಚಾರವಲ್ಲವೇ’ ಎಂದೂ ಪ್ರಶ್ನಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.