ADVERTISEMENT

ಬೌದ್ಧ ಬಿಕ್ಕುವಿನ ಬ್ಯಾಗ್‌ನಲ್ಲಿ ಕಾಡು ಹಂದಿ ಹಲ್ಲು!

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 5:42 IST
Last Updated 27 ಡಿಸೆಂಬರ್ 2019, 5:42 IST

ಬೆಂಗಳೂರು: ಬ್ಯಾಗ್‌ನಲ್ಲಿ ಕಾಡು ಹಂದಿ ಹಲ್ಲು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಬೋಡಿಯಾದ ಬೌದ್ಧ ಬಿಕ್ಕುವೊಬ್ಬರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರ ಭದ್ರತಾ ಪಡೆ (ಸಿಐಎಸ್‌ಎಫ್) ಬಂಧಿಸಿದೆ.

ಚಾನ್ ಸೋಪ್ಹೀಪ್ (44) ಬಂಧಿತರು. ಕಾಡು ಹಂದಿಯ ಹಲ್ಲು ಪತ್ತೆ ಪ್ರಕರಣ ಅತ್ಯಂತ ಅಪರೂಪವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಅರಣ್ಯ ವಲಯ ಅಧಿಕಾರಿಗಳು ತಿಳಿಸಿದರು.

ವಾರಣಾಸಿಗೆ ತೆರಳಲು ಚಾನ್ ಅವರು ಗುರುವಾರ ಮಧ್ಯಾಹ್ನ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಅವರ ಬ್ಯಾಗ್‌ ಅನ್ನು ಎಕ್ಸ್‌ರೇ ಬ್ಯಾಗೇಜ್ ಇನ್‌ಸ್ಪೆಕ್ಷನ್ ಸಿಸ್ಟಂನಲ್ಲಿ ತಪಾಸಣೆ ನಡೆಸಿದಾಗ ಮೂರು ಕಾಡು ಹಂದಿ ಹಲ್ಲುಗಳು ಕಾಣಿಸಿದೆ. ತಕ್ಷಣ ಅವರನ್ನು ವಶಕ್ಕೆ ಪಡೆದುಕೊಂಡು ಪೊಲೀಸರಿಗೆ ಒಪ್ಪಿಸಲಾಗಿದೆ.

ADVERTISEMENT

ದೂರಿನ ಅನ್ವಯ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಚಾನ್ ಸೋಪ್ಹೀಪ್ ಅವರನ್ನು ಬಂಧಿಸಿದ್ದಾರೆ. ಕಾಂಬೋಡಿಯಾದವರಾದ ಚಾನ್ ಅವರು ಅಲ್ಲಿ ಬೌದ್ಧ ಬಿಕ್ಕುವಾಗಿ ಪ್ರಸಿದ್ಧಿ ಹೊಂದಿದ್ದಾರೆ.

‘ಕಾಡು ಹಂದಿಯ ಹಲ್ಲುಗಳನ್ನು ಕಾಂಬೋಡಿಯಾದಲ್ಲೇ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದೆ. ಇಲ್ಲಿನ ಕಾನೂನುಗಳ ಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ’ ಎಂದು ವಿಚಾರಣೆ ವೇಳೆ ಅವರು ಪೊಲೀಸರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.