ADVERTISEMENT

ಸಾಂಟಾ ಕ್ಲಾಸ್ ವೇಷಧಾರಿ ಮಹಿಳೆಯರ ಬೈಕ್‌ ಸವಾರಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 20:02 IST
Last Updated 25 ಡಿಸೆಂಬರ್ 2021, 20:02 IST
ರ‍್ಯಾಲಿಯಲ್ಲಿ ಸಾಂಟಾ ಕ್ಲಾಸ್ ಪೋಷಾಕು ಧರಿಸಿದ 100 ಮಹಿಳೆಯರು ಬೈಕ್‌ ಸವಾರಿ ನಡೆಸಿದರು.
ರ‍್ಯಾಲಿಯಲ್ಲಿ ಸಾಂಟಾ ಕ್ಲಾಸ್ ಪೋಷಾಕು ಧರಿಸಿದ 100 ಮಹಿಳೆಯರು ಬೈಕ್‌ ಸವಾರಿ ನಡೆಸಿದರು.   

ಬೆಂಗಳೂರು:ಕ್ರಿಸ್‌ಮಸ್ ಅಂಗವಾಗಿ, ಯೋಧರ ಮಕ್ಕಳ ಶಿಕ್ಷಣಕ್ಕೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ಷಿ ಫಾರ್ ಸೊಸೈಟಿ ಮತ್ತು ಟಸ್ಕರ್‌ ಹರ್ಲಿ ತಂಡದ ವತಿಯಿಂದ ಏರ್ಪಡಿಸಿದ್ದ ರ‍್ಯಾಲಿಯಲ್ಲಿ ಸಾಂಟಾ ಕ್ಲಾಸ್ ಪೋಷಾಕು ಧರಿಸಿದ 100 ಮಹಿಳೆಯರುಬೈಕ್‌ ಸವಾರಿ ನಡೆಸಿದರು.

ಚಾನ್ಸರಿ ಪೆವಿಲಿಯನ್ ಹೋಟೆಲ್ ಬಳಿಯಿಂದ ಹೊರಟ ರ‍್ಯಾಲಿಯು ರೆಸಿಡೆನ್ಸಿ ರಸ್ತೆ, ಮೆಯೋ ಹಾಲ್, ಮಹಾತ್ಮ ಗಾಂಧಿ ರಸ್ತೆ, ವಿಧಾನಸೌಧ, ನೃಪತುಂಗ ರಸ್ತೆ, ಹಡ್ಸನ್ ವೃತ್ತ, ಕಂಠೀರವ ಕ್ರೀಡಾಂಗಣ, ಮಲ್ಯ ಆಸ್ಪತ್ರೆ ಮೂಲಕ ಸಾಗಿತು. ಷಿ ಫಾರ್ ಸೊಸೈಟಿಯ ಸಂಸ್ಥಾಪಕ ಸದಸ್ಯರಾದ ಹರ್ಷಿಣಿ ವೆಂಕಟೇಶ್, ವಿದ್ಯಾ ಮಂಜುನಾಥ್, ಶಾಲಿನಿ ದೀಪಕ್ ಮತ್ತು ಕವಿತಾ ಪ್ರಭಾಕರ್ ನೇತೃತ್ವದಬೈಕ್ ತಂಡಗಳು ಭಾಗವಹಿಸಿದ್ದವು.

ರ‍್ಯಾಲಿಗೆ ಶಾಸಕಿ ಸೌಮ್ಯಾ ರೆಡ್ಡಿ ಹಾಗೂ ಚಾನ್ಸರಿ ಪೆವಿಲಿಯನ್‌ ಹೋಟೆಲ್ ನಿರ್ದೇಶಕ ಭಾಸ್ಕರ್ ರಾಜು ಚಾಲನೆ ನೀಡಿದರು. ವೈಸ್ ಮಾರ್ಷಲ್ ಬಿ.ಕೆ.ಮುರುಳಿ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.