ಪೀಣ್ಯ ದಾಸರಹಳ್ಳಿ: ‘ನಮ್ಮ ಸಮುದಾಯದ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಬಾರದು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಜನಾಂಗವನ್ನು ಸಂಘಟಿಸಿ ಬಲಪಡಿಸುವ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಲು ಸಂಘ ರಚಿಸಿಕೊಂಡಿದ್ದೇವೆ’ ಎಂದು ಓಡ್ (ಭೋವಿ) ಕಮ್ಯೂನಿಟಿ ಕೌನ್ಸಿಲ್ ಆಪ್ ಇಂಡಿಯಾ ರಾಷ್ಟ್ರೀಯ ಕಾರ್ಯಾಧ್ಯಕ್ಷ ಎಂ.ಮನಿಮಾರಪ್ಪ ತಿಳಿಸಿದರು.
ಓಡ್(ಭೋವಿ) ಕಮ್ಯೂನಿಟಿ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
‘ನಮ್ಮ ಸಂಘಟನೆಯ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಅಧ್ಯಕ್ಷ ರವಿ ಮಾಕಳಿ ನೇತೃತ್ವದಲ್ಲಿ ಮಂದಿನ ದಿನಗಳಲ್ಲಿ ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಶಿಕ್ಷಣ, ಸಂಘಟನೆ, ಹೋರಾಟ ನಮ್ಮ ಧ್ಯೇಯವಾಗಿದ್ದು ಎಲ್ಲಾ ರಂಗಗಳಲ್ಲಿ ಮಹಿಳೆಯರು ತೊಡಗಿಸಿಕೊಳ್ಳಬೇಕು’ ಎಂದು ತಿಳಿಸಿದರು.
‘ಭೋವಿ ಜನಾಂಗದ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು’ ಎಂದು ಮುಖಂಡರಾದ ಭಾಗ್ಯ ತಿಳಿಸಿದರು. ಇದೇ ವೇಳೆ ಭೋವಿ ಸಮುದಾಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಅಭಿನಂದಿಸಲಾಯಿತು.
ರಾಜ್ಯಾಧ್ಯಕ್ಷ ಆನಂದಪ್ಪ, ರಾಷ್ಟ್ರೀಯ ಕಾರ್ಯಾಧ್ಯಕ್ಷ ಜಯರಾಮ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೈ ಶಂಕರ್, ಬೌರಿಂಗ್ ಆಸ್ಪತ್ರೆಯ ಮುಖ್ಯ ನಿರ್ದೇಶಕಿ ಡಾ.ನಿರ್ಮಲ, ರಾಷ್ಟ್ರೀಯ ಉಪಾಧ್ಯಕ್ಷ ಯಲ್ಲಪ್ಪ, ಅಂತರರಾಷ್ಟ್ರೀಯ ಖಜಾಂಚಿ ವೆಂಕಟೇಶ್, ಗಂಗಾಧರ್, ಅಂತರರಾಷ್ಟ್ರೀಯ ಮಹಿಳಾ ನಿರ್ದೇಶಕಿ ಗೀತಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.