ADVERTISEMENT

ವಿಶ್ವ ಹೃದಯ ದಿನದಂದು ಮಿಡಿದ ಯುವಕನ ಹೃದಯ

40 ವರ್ಷದ ವ್ಯಕ್ತಿಗೆ ಯಶಸ್ವಿ ಕಸಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 19:37 IST
Last Updated 29 ಸೆಪ್ಟೆಂಬರ್ 2019, 19:37 IST
ಯುವಕನ ಹೃದಯವನ್ನು ನಾರಾಯಣ ಹಾರ್ಟ್‌ ಸೆಂಟರ್‌ಗೆ ತರಲಾಯಿತು
ಯುವಕನ ಹೃದಯವನ್ನು ನಾರಾಯಣ ಹಾರ್ಟ್‌ ಸೆಂಟರ್‌ಗೆ ತರಲಾಯಿತು   

ಬೆಂಗಳೂರು: ನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿರುವ ನಾರಾಯಣ ಹಾರ್ಟ್ ಸೆಂಟರ್‌ನ ವೈದ್ಯರು ಮಿದುಳು ನಿಷ್ಕ್ರಿಯಗೊಂಡಿದ್ದ ಯುವಕನ ಹೃದಯವನ್ನು40 ವರ್ಷದ ಹೃದ್ರೋಗಿಗೆ ಯಶಸ್ವಿಯಾಗಿ ಕಸಿ ಮಾಡುವ ಮೂಲಕ ವಿಶ್ವ ಹೃದಯ ದಿನ ಆಚರಿಸಿದರು.

ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ 26 ವರ್ಷದ ಯುವಕನಿಗೆ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದ ಪರಿಣಾಮ ವೈದ್ಯರು ಯುವಕನ ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿ, ಕುಟುಂಬದ ಸದಸ್ಯರಿಗೆ ಅಂಗಾಂಗ ದಾನದ ಬಗ್ಗೆ ಮನವರಿಕೆ ಮಾಡಿಸಿದರು. ಕುಟುಂಬದ ಸಮ್ಮತಿಯ ಬಳಿಕ ಹೃದಯವನ್ನು ನಾರಾಯಣ ಹಾರ್ಟ್‌ ಸೆಂಟರ್‌ಗೆ ರವಾನಿಸಲಾಯಿತು.

ಮೈಸೂರಿನ ವ್ಯಕ್ತಿ ಹೃದಯಬೇನೆ ತೊಂದರೆಯಿಂದ ನಾರಾಯಣ ಹಾರ್ಟ್‌ ಸೆಂಟರ್‌ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ವ್ಯಕ್ತಿಯನ್ನು ಪರೀಕ್ಷಿಸಿದ ವೈದ್ಯರು ಹೃದಯಕಸಿಗೆ ಒಳಗಾಗುವಂತೆ ಸೂಚಿಸಿದ್ದರು. ಇದರಿಂದಾಗಿ ರೋಗಿ ಜೀವಸಾರ್ಥಕತೆಯಡಿ ನಾಲ್ಕು ತಿಂಗಳ ಹಿಂದೆಯೇ ಹೆಸರು ನೋಂದಾಯಿಸಿದ್ದರು. ಯುವಕನ ಹೃದಯ ಹೋಂದಾಣಿಕೆಯಾದ ಪರಿಣಾಮ ಯಶಸ್ವಿಯಾಗಿ ಹೃದಯ ಕಸಿ ಮಾಡಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.