ADVERTISEMENT

ಯೋಗ ವಿಜ್ಞಾನ ಕೇಂದ್ರ ಶೀಘ್ರ ಸ್ಥಾಪನೆ

ಜ್ಞಾನಭಾರತಿ ಕ್ಯಾಂಪಸ್‌ಗೆ ಮತ್ತೊಂದು ಗರಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 21:51 IST
Last Updated 8 ಮಾರ್ಚ್ 2020, 21:51 IST
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು ವಿಶ್ವವಿದ್ಯಾಲಯ   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಂತರ ವಿಶ್ವವಿದ್ಯಾಲಯ ಯೋಗ ವಿಜ್ಞಾನ ಕೇಂದ್ರ ತಲೆ ಎತ್ತುವ ನಿರೀಕ್ಷೆ ಇದ್ದು, ಈ ಕೇಂದ್ರ ದೇಶಕ್ಕೇ ಪ್ರಧಾನ ಕಚೇರಿಯಂತೆ ಕೆಲಸ ಮಾಡಲಿದೆ.

ವಿಶ್ವವಿದ್ಯಾಲಯಗಳು ಮತ್ತು ಪದವಿ ಕಾಲೇಜುಗಳ ಮೌಲ್ಯಮಾಪನಕ್ಕೆ ಇರುವ ‘ನ್ಯಾಕ್‌’ ಸಂಸ್ಥೆಯಂತೆಯೇ,ಯೋಗ ವಿಜ್ಞಾನ ಕೋರ್ಸ್‌ಗಳನ್ನು ಬೋಧಿಸುವ ಎಲ್ಲಾ ಸಂಸ್ಥೆಗಳ ಮೇಲೆ ಈ ಕೇಂದ್ರ ನಿಯಂತ್ರಣ ಹೊಂದಿರುತ್ತದೆ. ವಿಶೇಷ
ವೆಂದರೆ ‘ನ್ಯಾಕ್‌’ ಸಂಸ್ಥೆಯ ಕೇಂದ್ರ ಕಚೇರಿ ಸಹ ಜ್ಞಾನಭಾರತಿ ಕ್ಯಾಂಪಸ್‌ನಲ್ಲೇ ಇದೆ.

ಈಚೆಗೆ ನಡೆದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಯೋಗ ವಿಜ್ಞಾನ ಕೇಂದ್ರಕ್ಕೆ 15 ಎಕರೆ ಜಮೀನು ನೀಡಲು ಸಮ್ಮತಿ ಸೂಚಿಸಲಾಗಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) 25 ಎಕರೆ ಜಮೀನು ಕೇಳಿತ್ತು.

ADVERTISEMENT

‘ಬೆಂಗಳೂರು ಹೊರವಲಯದ ಎಸ್‌.ವ್ಯಾಸ ವಿಶ್ವವಿದ್ಯಾಲಯದ ಆವರಣದಲ್ಲಿ ಈ ಕೇಂದ್ರ ಸ್ಥಾಪಿಸುವ ಯೋಜನೆ ಇತ್ತು. ಆದರೆ ನಿವೇಶನ ಸಮಸ್ಯೆ ಹಾಗೂ ಸರ್ಕಾರಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಒಳಗೆಯೇ ಈ ಕೇಂದ್ರ ಇರಬೇಕು ಎಂಬ ಯುಜಿಸಿ ಚಿಂತನೆಯಿಂದಾಗಿ ನಮ್ಮ ವಿಶ್ವವಿದ್ಯಾಲಯದ ಆವರಣದಲ್ಲಿ ಈ ಕೇಂದ್ರ ಬರಲಿದೆ. ಬುದ್ಧ ಧ್ಯಾನ ಕೇಂದ್ರದ ಸಮೀಪ ಯೋಗ ಕೇಂದ್ರ ಸ್ಥಾಪನೆಗೊಳ್ಳಲಿದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.