ADVERTISEMENT

ಯೋಗ ದಿನ: ಮನೆಯಲ್ಲೇ ಆಚರಣೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 21:45 IST
Last Updated 16 ಜೂನ್ 2021, 21:45 IST

ಬೆಂಗಳೂರು: ಕೋವಿಡ್ ಕಾರಣ ಈ ಬಾರಿ ಕೂಡ ಅಂತರರಾಷ್ಟ್ರೀಯ ಯೋಗ ದಿನವನ್ನು ಆನ್‌ಲೈನ್ ವೇದಿಕೆಯ ಮೂಲಕ ಮನೆಯಲ್ಲಿಯೇ ಆಚರಿಸಬೇಕು ಎಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಆಯುಷ್ ಇಲಾಖೆ ಸೂಚಿಸಿದೆ.

ಇದೇ 21ಕ್ಕೆ 7ನೇ ಅಂತರರಾಷ್ಟ್ರೀಯ ಯೋಗ ದಿನ ನಡೆಯಲಿದೆ.‘ಮನೆಯಲ್ಲೇ ಇದ್ದು, ಯೋಗವನ್ನು ಆಚರಿಸಿ’ಎನ್ನುವುದು ಈ ಬಾರಿಯ ಘೋಷವಾಕ್ಯ.

‘ಯೋಗ ದಿನದಂದು ಬೆಳಿಗ್ಗೆ 7 ಗಂಟೆಯಿಂದ ಯೋಗಾಭ್ಯಾಸ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಇಲಾಖೆಯ ಜಾಲತಾಣ ಅಥವಾ ಯೋಗವನ್ನು ಪ್ರೋತ್ಸಾ ಹಿ ಸುವ ಸಂಘ ಸಂಸ್ಥೆಗಳ ಜಾಲತಾಣಗಳ ಮೂಲಕ ತರಬೇತಿ ಪಡೆದುಕೊಳ್ಳಬಹುದು. ಯೋಗಾಸನಗಳಿಂದ ಮಾನಸಿಕ ಮತ್ತು ದೈಹಿಕ ಸದೃಢತೆಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯ’ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಹಮ್ಮದ್ ರಫಿ ಎಚ್. ಹಕೀಮ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.