ADVERTISEMENT

ಅಪಾಯಕಾರಿ ಸ್ಟಿರಾಯ್ಡ್; ಯುವ ಕಾಂಗ್ರೆಸ್ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 18 ಮೇ 2021, 15:22 IST
Last Updated 18 ಮೇ 2021, 15:22 IST

ಬೆಂಗಳೂರು: ‘ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರಕ್ಷಾ ರಾಮಯ್ಯ ಹಾಗೂ ಇತರರು ಕೊರೊನಾ ಸೋಂಕಿತರಿಗೆ ಅಪಾಯಕಾರಿ ಸ್ಟಿರಾಯ್ಡ್ ನೀಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ಮಂಗಳವಾರ ದೂರು ನೀಡಿದ್ದಾರೆ.

‘ವೈದ್ಯರ ಸಲಹೆ ಇಲ್ಲದೇ ವೈದ್ಯಕೀಯ ಕಿಟ್ ಸಿದ್ಧಪಡಿಸಿರುವ ಯುವ ಕಾಂಗ್ರೆಸ್, ಅದನ್ನೇ ಸೋಂಕಿತರಿಗೆ ನೀಡಿದೆ. ಅದರಲ್ಲಿರುವ ಸ್ಟಿರಾಯ್ಡ್ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ಬೇರೆ ರೋಗಗಳಿಗೆ ದಾರಿ ಮಾಡಿಕೊಡಲಿದೆ’ ಎಂದು ದೂರಿನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT