ADVERTISEMENT

ಜೀ ಕನ್ನಡ ನ್ಯೂಸ್ ಪ್ರಶಸ್ತಿ: BSY ಸಹಿತ ನಾಲ್ವರಿಗೆ 'ಜೀವಮಾನ ಸಾಧನೆ ಪ್ರಶಸ್ತಿ’

ಬಿ.ಎಸ್. ಯಡಿಯೂರಪ್ಪ ಸಹಿತ ನಾಲ್ವರಿಗೆ ಅತ್ಯುನ್ನತ 'ಜೀವಮಾನ ಸಾಧನೆ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 23:30 IST
Last Updated 12 ಫೆಬ್ರುವರಿ 2026, 23:30 IST
ಜೀ ಕನ್ನಡ ನ್ಯೂಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜೀವಮಾನ ಸಾಧನೆಗಾಗಿ ಜೀ ಕನ್ನಡ ನ್ಯೂಸ್‌ ಸಾಧಕರ ಪ್ರಶಸ್ತಿ–2026 ನೀಡಿ ಗೌರವಿಸಲಾಯಿತು. ಎಸ್. ರವಿ, ಎಸ್. ನಾರಾಯಣ್, ಪಿ.ಎಂ. ನರೇಂದ್ರಸ್ವಾಮಿ, ನಿರ್ಮಲಾನಂದನಾಥ ಸ್ವಾಮೀಜಿ, ಪೂಜಾ ಗಾಂಧಿ, ರಹೀಂ ಖಾನ್ ಮತ್ತು ಪ್ರಮೋದ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ
ಜೀ ಕನ್ನಡ ನ್ಯೂಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜೀವಮಾನ ಸಾಧನೆಗಾಗಿ ಜೀ ಕನ್ನಡ ನ್ಯೂಸ್‌ ಸಾಧಕರ ಪ್ರಶಸ್ತಿ–2026 ನೀಡಿ ಗೌರವಿಸಲಾಯಿತು. ಎಸ್. ರವಿ, ಎಸ್. ನಾರಾಯಣ್, ಪಿ.ಎಂ. ನರೇಂದ್ರಸ್ವಾಮಿ, ನಿರ್ಮಲಾನಂದನಾಥ ಸ್ವಾಮೀಜಿ, ಪೂಜಾ ಗಾಂಧಿ, ರಹೀಂ ಖಾನ್ ಮತ್ತು ಪ್ರಮೋದ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರಿಗೆ ‘ಜೀ ಕನ್ನಡ ನ್ಯೂಸ್‌’ ವಾಹಿನಿ ವತಿಯಿಂದ ‘ಜೀವಮಾನದ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಅಲ್ಲದೇ ವಿವಿಧ ಕ್ಷೇತ್ರದ 30 ಸಾಧಕರಿಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್‌ ಪ್ರದಾನ ಮಾಡಲಾಯಿತು.

ಚಲನಚಿತ್ರ ನಿರ್ದೇಶಕ ಎಸ್. ನಾರಾಯಣ್, ಅಂತರರಾಷ್ಟ್ರೀಯ ಸ್ನೂಕರ್ ಕ್ರೀಡಾಪಟು ಚಿತ್ರಾ ಮಗಿಮೈರಾಜ್ ಹಾಗೂ ಅಕ್ಷರ ಲೋಕದ ಕಾಯಕಯೋಗಿ ‍ಪುಸ್ತಕಗಳ ಸಂಗ್ರಹಕಾರ ಎಂ. ಅಂಕೇಗೌಡ ಅವರಿಗೂ 'ಜೀವಮಾನ ಸಾಧನೆ’ ಪ್ರಶಸ್ತಿ ನೀಡಲಾಯಿತು. ‘ಪ್ರಜಾವಾಣಿ’ ಮಾಧ್ಯಮ ಸಹಯೋಗ ನೀಡಿತ್ತು.

‘ಐದೂವರೆ ದಶಕದಿಂದ ರಾಜಕೀಯ ಜೀವನದಲ್ಲಿ ಇದ್ದರೂ ನಾನು ಮುಖ್ಯಮಂತ್ರಿಯಾಗಿ ಒಟ್ಟು ಐದು ವರ್ಷವಷ್ಟೇ ಇದ್ದೆ. ಆದರೂ ನಾಡಿನ ಜನರು, ರೈತರು ನನ್ನನ್ನು ನೆನಪು ಇಟ್ಟುಕೊಂಡಿದ್ದಾರೆ. ಈ ಪ್ರಶಸ್ತಿಯನ್ನು ಅವರಿಗೆ ಅರ್ಪಿಸುತ್ತೇನೆ’ ಎಂದು ಯಡಿಯೂರಪ್ಪ ತಿಳಿಸಿದರು.

ADVERTISEMENT

ಜೀ ಟಿವಿಯ ಸಂಪಾದಕ ಎಸ್‌. ರವಿ ಮಾತನಾಡಿ, ‘ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ನಮ್ಮ ಮುಂದೆಯೇ  ಇರುತ್ತಾರೆ. ಅವರು ಸಾಧಕರು ಎಂಬುದೇ ನಮಗೆ ಗೊತ್ತಿರುವುದಿಲ್ಲ. ಅವರು ಏನು ಮಾಡಿದ್ದಾರೆ ಎಂಬುದರ ಅರಿವು ಇರುವುದಿಲ್ಲ. ಅವರನ್ನು ಗುರುತಿಸಲು ಸಾಧ್ಯವಾದಾಗ ಸಮಾಜ ಬೇರೆಯವರಿಗೆ ಸ್ಫೂರ್ತಿಯಾಗುತ್ತದೆ’ ಎಂದು ಹೇಳಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಟಿ ಪೂಜಾಗಾಂಧಿ, ನಟ ಪ್ರಮೋದ್‌ ಶೆಟ್ಟಿ, ‘ಪ್ರಜಾವಾಣಿ‌’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಸಚಿವ ರಹೀಂ ಖಾನ್, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಸಹಿತ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ಭರತನಾಟ್ಯ, ಮ್ಯಾಜಿಕ್‌, ಹಾಸ್ಯ ಸಹಿತ ವಿವಿಧ ಮನರಂಜನೆ ಕಾರ್ಯಕ್ರಮಗಳು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮೆರುಗು ನೀಡಿದವು. ದೇಶದ ಪ್ರಥಮ ಖಾಸಗಿ ಚಾನೆಲ್‌ ಆಗಿರುವ ಜಿ ಟಿವಿ ನಡೆದು ಬಂದ ಹಾದಿಯನ್ನು ಮೆಲುಕು ಹಾಕಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.