ADVERTISEMENT

ಬಸವಕಲ್ಯಾಣ: ಪಂಚಾಯಿತಿಗಳ ಚಟುವಟಿಕೆ ಚುರುಕು:ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆಗೆ ಸಮಯ ನಿಗದಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2012, 5:05 IST
Last Updated 10 ನವೆಂಬರ್ 2012, 5:05 IST

ಬಸವಕಲ್ಯಾಣ: ಗ್ರಾಮ ಪಂಚಾಯಿತಿಯ 2 ನೇ ಅವಧಿಗೆ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಡಿಸೆಂಬರ್ 10 ರೊಳಗೆ ಪೂರ್ಣಗೊಳಿಸಲು ಸಮಯ ನಿಗದಿಗೊಳಿಸಿದ್ದರಿಂದ ಈ ಸಂಬಂಧ ಎಲ್ಲೆಡೆ ಚಟುವಟಿಕೆಗಳು ಚುರುಕುಕೊಂಡಿವೆ.

ತಾಲ್ಲೂಕಿನಲ್ಲಿ ಒಟ್ಟು 36 ಗ್ರಾಮ ಪಂಚಾಯಿತಿಗಳಿದ್ದು ಅವುಗಳಲ್ಲಿ ಹುಲಸೂರ, ತೊಗಲೂರ, ಗೋರಟಾ ಹೊರತುಪಡಿಸಿ ಉಳಿದೆಡೆ ಆಯ್ಕೆ ನಡೆಯಲಿದೆ. ಇದಕ್ಕಾಗಿ ಶುಕ್ರವಾರ 8 ಜನ ಅಧಿಕಾರಿಗಳನ್ನು ನೇಮಿಸಲಾಗಿದೆ. ಒಬ್ಬೊಬ್ಬರಿಗೆ ಕೆಲ ಪಂಚಾಯಿತಿಗಳನ್ನು ವಹಿಸಿಕೊಟ್ಟು ಆಯ್ಕೆ ದಿನಾಂಕ ಅವರ ಅನುಕೂಲಕ್ಕೆ ತಕ್ಕಂತೆ ನಿಗದಿಗೊಳಿಸಲು ಸೂಚಿಸಲಾಗಿದೆ ಎಂದು ತಹಸೀಲ್ದಾರ ಶಿವರಾಜ ಹಲಬರ್ಗೆ ತಿಳಿಸಿದ್ದಾರೆ.

ಸ್ಪರ್ಧೆ: ಹಾಗೆ ನೋಡಿದರೆ, ತಿಂಗಳ ಹಿಂದೆಯೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಮೀಸಲಾತಿ ಪ್ರಕಟಿಸಲಾಗಿತ್ತು. ಆದ್ದರಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸದಸ್ಯರನ್ನು ತಮ್ಮತ್ತ ಓಲೈಸಿಕೊಳ್ಳಲು ಅಂದಿನಿಂದಲೇ ಪಾರ್ಟಿ ಕೊಡುವುದನ್ನು ಆರಂಭಿಸಿದ್ದಾರೆ. ಕೆಲವೆಡೆ ಸದಸ್ಯರನ್ನು ತಿರುಪತಿ, ಶಿರಡಿಗೆ ಒಯ್ಯಲಾಗಿದೆ ಎನ್ನಲಾಗುತ್ತಿದೆ.

ಹೀಗಾಗಿ ಪಂಚಾಯಿತಿ ಕಾರ್ಯಕಲಾಪಗಳು ತಿಂಗಳಿಂದ ಸ್ಥಗಿತಗೊಂಡಿವೆ. ಮನೆಗಳ ಫಲಾನುಭವಿಗಳ ಆಯ್ಕೆಗೆ ಗ್ರಾಮಸಭೆ ನಡೆಸಬೇಕಾಗಿದ್ದರೂ ಸದಸ್ಯರು ಸ್ಥಳದಲ್ಲಿ ಇಲ್ಲದ್ದರಿಂದ ಬಹಳಷ್ಟು ಕಡೆ ಸಭೆ ನಡೆದಿಲ್ಲ ಎನ್ನಲಾಗಿದೆ.
ಶೇ 50 ರಷ್ಟು: ಪಂಚಾಯಿತಿಗಳ ಅಧ್ಯಕ್ಷ - ಉಪಾಧ್ಯಕ್ಷರ ಸ್ಥಾನಗಳಲ್ಲಿ ಮಹಿಳೆಯರಿಗೆ ಈ ಸಲ ಶೇ 50 ರಷ್ಟು ಮೀಸಲಿಡಲಾಗಿದೆ. ಆದ್ದರಿಂದ 19 ರಲ್ಲಿ ಮಹಿಳೆಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ನೇಮಕಗೊಳ್ಳುತ್ತಾರೆ.
ಎಸ್‌ಸಿಗೆ 8 ಸ್ಥಾನಗಳು, ಎಸ್‌ಟಿಗೆ 7 ಸ್ಥಾನಗಳು, ಹಿಂದುಳಿದ ವರ್ಗ- ಎ ಗುಂಪಿಗೆ 2, ಹಿಂದುಳಿದ ವರ್ಗ-ಬಿ ಗುಂಪಿಗೆ 1 ಮತ್ತು 18 ಸ್ಥಾನಗಳು ಸಾಮಾನ್ಯರಿಗೆ ಮೀಸಲಾಗಿವೆ.

ಮೀಸಲು: ರಾಜೇಶ್ವರ- ಹಿಂ ವರ್ಗ-ಬಿ, ಸಾಮಾನ್ಯ (ಮ) ಮಂಠಾಳ- ಸಾಮಾನ್ಯ, ಹಿಂ ವರ್ಗ-ಬ
ಮುಡಬಿ- ಸಾಮಾನ್ಯ(ಮ), ಎಸ್‌ಸಿ ಕೊಹಿನೂರ್- ಎಸ್‌ಸಿ, ಸಾಮಾನ್ಯ(ಮ,) ನಾರಾಯಣಪುರ- ಎಸ್‌ಸಿ (ಮ), ಹಿಂ ವರ್ಗ-ಎ (ಮ) ಭೋಸಗಾ- ಹಿಂ ವರ್ಗ-ಎ (ಮ), ಎಸ್‌ಸಿ (ಮ) ತಡೋಳಾ- ಹಿಂ ವರ್ಗ-ಎ (ಮ), ಎಸ್‌ಸಿ ಗುಂಡೂರ್- ಸಾಮಾನ್ಯ, ಸಾಮಾನ್ಯ (ಮ)

ಬಟಗೇರಾ- ಸಾಮಾನ್ಯ, ಎಸ್‌ಟಿ (ಮ) ಗಡಿಗೌಂಡಗಾಂವ- ಸಾಮಾನ್ಯ, ಎಸ್‌ಸಿ (ಮ) ಬೇಲೂರ- ಎಸ್‌ಟಿ (ಮ), ಸಾಮಾನ್ಯ ಮೋರಖಂಡಿ- ಸಾಮಾನ್ಯ, ಎಸ್‌ಟಿ (ಮ) ಹಾರಕೂಡ- ಸಾಮಾನ್ಯ, ಎಸ್‌ಸಿ (ಮ) ಚಂಡಕಾಪುರ- ಸಾಮಾನ್ಯ, ಎಸ್‌ಟಿ (ಮ) ಖೇರ್ಡಾ(ಬಿ)- ಸಾಮಾನ್ಯ, ಸಾಮಾನ್ಯ(ಮ) ಪ್ರತಾಪುರ- ಸಾಮಾನ್ಯ(ಮ), ಎಸ್‌ಟಿ ಧನ್ನೂರ್(ಕೆ)- ಸಾಮಾನ್ಯ(ಮ), ಎಸ್‌ಟಿ ಘೋಟಾಳಾ- ಸಾಮಾನ್ಯ(ಮ), ಎಸ್‌ಟಿ ನಿರ್ಗುಡಿ- ಸಾಮಾನ್ಯ(ಮ),

ಸಾಮಾನ್ಯ
ಮುಚಳಂಬ- ಸಾಮಾನ್ಯ(ಮ), ಎಸ್‌ಸಿ ಯರಬಾಗ- ಎಸ್‌ಸಿ, ಸಾಮಾನ್ಯ ಉಜಳಂಬ- ಸಾಮಾನ್ಯ(ಮ), ಎಸ್‌ಟಿ (ಮ) ಮಿರಖಲ್- ಎಸ್‌ಸಿ, ಸಾಮಾನ್ಯ (ಮ) ರಾಜೋಳಾ- ಎಸ್‌ಸಿ, ಸಾಮಾನ್ಯ ಕಿಟ್ಟಾ- ಎಸ್‌ಸಿ (ಮ), ಸಾಮಾನ್ಯ ಸಸ್ತಾಪುರ- ಎಸ್‌ಸಿ (ಮ), ಸಾಮಾನ್ಯ ಯರಂಡಗಿ- ಎಸ್‌ಸಿ (ಮ), ಸಾಮಾನ್ಯ ಬೆಟಬಾಲ್ಕುಂದಾ- ಎಸ್‌ಟಿ, ಸಾಮಾನ್ಯ (ಮ) ಆಲಗೂಡ- ಎಸ್‌ಟಿ, ಸಾಮಾನ್ಯ (ಮ) ಇಸ್ಲಾಂಪುರ- ಎಸ್‌ಟಿ (ಮ), ಸಾಮಾನ್ಯ (ಮ) ಏಕಲೂರ- ಎಸ್‌ಟಿ (ಮ), ಸಾಮಾನ್ಯ ಕಲಖೋರಾ- ಎಸ್‌ಟಿ (ಮ), ಹಿಂ ವರ್ಗ-ಎ (ಮ) ಲಾಡವಂತಿ- ಸಾಮಾನ್ಯ, ಎಸ್‌ಸಿ (ಮ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.