ADVERTISEMENT

2019 ವರ್ಷದ ಹಿನ್ನೋಟ: ಬೀದರ್

ಚಂದ್ರಕಾಂತ ಮಸಾನಿ
Published 30 ಡಿಸೆಂಬರ್ 2019, 15:37 IST
Last Updated 30 ಡಿಸೆಂಬರ್ 2019, 15:37 IST
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಬೀದರ್‌ನಲ್ಲಿ ಅಂತರ್ ಕಾಲೇಜುಗಳ ಯುವ ಜನೋತ್ಸವದಲ್ಲಿ ದೀಪ ನೃತ್ಯ ಪ್ರದರ್ಶಿಸಿದ ಬಾಗೋಲಕೋಟೆಯ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಬೀದರ್‌ನಲ್ಲಿ ಅಂತರ್ ಕಾಲೇಜುಗಳ ಯುವ ಜನೋತ್ಸವದಲ್ಲಿ ದೀಪ ನೃತ್ಯ ಪ್ರದರ್ಶಿಸಿದ ಬಾಗೋಲಕೋಟೆಯ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು   

ಜನವರಿ 18: ಕೊಳಾರ ಕೈಗಾರಿಕೆ ಪ್ರದೇಶದಲ್ಲಿ ಸ್ಫೋಟವಾಗಿ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡರು.
ಜನವರಿ 28: ರೈಲು ನಿಲ್ದಾಣದಲ್ಲಿ ಸಂಸದರು ವೈಫೈ ಉದ್ಘಾಟಿಸಿದರು.

ಫೆಬ್ರುವರಿ 04: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯಿತು.

ಮಾರ್ಚ್ 31: ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಖಲು.

ADVERTISEMENT

ಏಪ್ರಿಲ್ 09: ನಗರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ.

ಮೇ 13: ಬಸವಕಲ್ಯಾಣ ತಾಲ್ಲೂಕಿನ ಹಿರೇನಾಗಾಂವ ಗ್ರಾಮದ ಹೊರವಲಯದಲ್ಲಿರುವ ತೆರೆದ ಬಾವಿಗೆ ಟ್ಯಾಂಕರ್‌ ನೀರು ಸುರಿದು ಹೋದ ನಂತರ ಮಹಿಳೆಯರು ಸುಡು ಬಿಸಿಲಲ್ಲೇ ನೀರು ಸೇದಿಕೊಂಡ ಪರಿಸ್ಥಿತಿ ನಿರ್ಮಾಣವಾಗಿತ್ತು.

ಜೂನ್‌ 26: ಬಸವಕಲ್ಯಾಣದಲ್ಲಿ ಮನೆಯ ಮಾಳಿಗೆ ಕುಸಿದು ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟರು.

ಜೂನ್‌ 27: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಸವಕಲ್ಯಾಣ ತಾಲ್ಲೂಕಿನ ಉಜಳಂಬದಲ್ಲಿ ಜನತಾ ದರ್ಶನದಲ್ಲಿ ಪಾಲ್ಗೊಂಡು ಗ್ರಾಮ ವಾಸ್ತವ್ಯ ಮಾಡಿ ಗಡಿಭಾಗದ ಜನರ ಸಮಸ್ಯೆಗಳನ್ನು ಆಲಿಸಿದರು.

ಜುಲೈ 02: ಭಾಲ್ಕಿ ತಾಲ್ಲೂಕಿನ ಕಣಜಿ ಗ್ರಾಮದಲ್ಲಿ ಯುವಕನೊಬ್ಬ ಹಣಕ್ಕಾಗಿ ತನ್ನ ಅಜ್ಜಿಯನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ.
ಜುಲೈ 16: ಗುಂಪಾದ ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ ಅಮೃತ ಮಹೋತ್ಸವ ಅಚರಿಸಲಾಯಿತು.
ಆಗಸ್ಟ್ 17: ಕರ್ನಾಟಕ ಭೂ ಕಂದಾಯ ಕಾಯ್ದೆ ಉಲ್ಲಂಘಿಸಿ ಅನಧಿಕೃತವಾಗಿ ಲೇಔಟ್‌ ಸೃಷ್ಟಿಸಿ ನಿವೇಶನಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿರುವ ಬೀದರ್‌ ತಾಲ್ಲೂಕಿನ 157 ಜಮೀನುಗಳ ಮಾಲೀಕರಿಗೆ ಜಿಲ್ಲಾಧಿಕಾರಿ ನೋಟಿಸ್‌ ಜಾರಿ.
ಸೆಪ್ಟೆಂಬರ್ 24: ಹೈದರಾಬಾದ್‌ನಲ್ಲಿ ಕದ್ದ ಕಾರ್‌ನಲ್ಲಿ ಬಂದು ಹುಮನಾಬಾದ್‌ ತಾಲ್ಲೂಕಿನ ಗ್ರಾಮವೊಂದರ ಬಳಿ ಲಾರಿ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಹಣ ಲೂಟಿ ಮಾಡಿ ಇನ್ನೊಂದು ದರೋಡೆಗೆ ಸಜ್ಜಾಗುತ್ತಿದ್ದ ದರೋಡೆಕೋರರ ತಂಡದ ಮೇಲೆ ಪೊಲೀಸರು ಎರಡು ಸುತ್ತು ಗುಂಡು ಹಾರಿಸಿದರು.

ಸೆಪ್ಟೆಂಬರ್ 30: ಬೀದರ್ ತಾಲ್ಲೂಕಿನ ವಿಳಾಸಪುರ ಬಳಿ ಲಾರಿ ಡಿಕ್ಕಿ ಹೊಡೆದು ಆರು ಆಕಳುಗಳು ಮೃತಪಟ್ಟವು.

ಅಕ್ಟೋಬರ್ 04: ಜಿಲ್ಲೆಯಲ್ಲಿ ಬೆಳ್ಳುಳ್ಳಿ ಬೆಲೆ ₹200ಕ್ಕೆ ತಲುಪಿ ಗ್ರಾಹಕರು ಹುಬ್ಬೇರಿಸುವಂತೆ ಮಾಡಿತು.

ಅಕ್ಟೋಬರ್ 18: ಮಾರಕ ಗ್ಲ್ಯಾಂಡರ್ಸ್‌ ರೋಗದಿಂದ ನಗರದ ಚಿದ್ರಿಯಲ್ಲಿ ಎರಡು ಕುದುರೆಗಳು ಮೃತಪಟ್ಟ ಕಾರಣ ಕುದುರೆ ಹಾಗೂ ಕತ್ತೆಗಳ ಅಂತರರಾಜ್ಯ ಸಂಚಾರಕ್ಕೆ ನಿಷೇಧ ಹೇರಲಾಯಿತು.

ಅಕ್ಟೋಬರ್ 22: ಬೀದರ್‌ನ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದ ಎತ್ತರ ಜಿಗಿತದಲ್ಲಿ ಪುರುಷ ವಿಭಾಗದಲ್ಲಿ ಮಹಮ್ಮದ್ ಹಾಗೂ ಮಹಿಳೆಯರ ವಿಭಾಗದಲ್ಲಿ ಲಾವಣ್ಯ ಮೊದಲ ಬಹುಮಾನ ಗೆದ್ದುಕೊಂಡರು.
ನವೆಂಬರ್ 19: ಇಂಡೊನೇಷ್ಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಜಿಲ್ಲೆಯ ಹುಮನಾಬಾದ್‌ ತಾಲ್ಲೂಕಿನ ಧುಮ್ಮನಸೂರು ಗ್ರಾಮದ ನಿಶಾ ತಾಳಂಪಳ್ಳಿ ‘ಮಿಸ್‌ ಇಂಡಿಯಾ ಇಂಟರ್‌ನ್ಯಾಷನಲ್‌’ ಕಿರೀಟವನ್ನು ಗೆದ್ದುಕೊಂಡರು.

ನವೆಂಬರ್ 25: ಜೈ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ನಗರದಲ್ಲಿ ಒಂದು ಕಿ.ಮೀ.ಉದ್ದದ ನಾಡ ಬಾವುಟದ ಮೆರವಣಿಗೆ ನಡೆಸಲಾಯಿತು.

ನವೆಂಬರ್ 30: ಹೈದರಾಬಾದ್–ಸೋಲಾಪುರ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 65)ಯಲ್ಲಿ ಚಿಟಗುಪ್ಪ ತಾಲ್ಲೂಕಿನ ಮಂಗಲಗಿ ಗ್ರಾಮದ ಬಳಿ ನಿರ್ಮಿಸಿರುವ ಎಲ್‌ ಆ್ಯಂಡ್‌ ಟಿ ಡೆಕ್ಕನ್‌ ಟೋಲ್‌ ಪ್ಲಾಜಾ ಬಳಿ ಫಾಸ್ಟ್‌ಟ್ಯಾಗ್‌ ಮೂಲಕ ಶುಲ್ಕ ಆಕರಣೆ ಕಾರ್ಯ ಆರಂಭವಾಯಿತು.

ಡಿಸೆಂಬರ್‌ 05: ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೆಳ್ಳಿ ಹೊರವಲಯದಲ್ಲಿ ಮಹಾರಾಷ್ಟ್ರದಿಂದ ತೆಲಂಗಾಣಕ್ಕೆ ತೆರಳುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡು, ಕಾರಿನಲ್ಲಿದ್ದ ಮಹಿಳೆಯೊಬ್ಬರು ಸಜೀವ ದಹನಗೊಂಡರು.
ಡಿಸೆಂಬರ್‌ 26: ಚಿಟಗುಪ್ಪದಲ್ಲಿ ಸೂರ್ಯಗ್ರಹಣ ಪೂರ್ಣಗೊಳ್ಳುವವರೆಗೂ ದೈಹಿಕ ಅಂಗವಿಕಲ ಮಕ್ಕಳನ್ನು ಕುರಿ ಹಿಕ್ಕೆಯ ತಿಪ್ಪೆಯಲ್ಲಿ ಹೂತಿಟ್ಟು ಪಾಲಕರು ಮೌಢ್ಯ ಮೆರೆದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.