ADVERTISEMENT

ಯುವ ದಿನಾಚರಣೆ; ವಿವೇಕ ಬ್ಯಾಂಡ್‌ ಅಭಿಯಾನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 6:53 IST
Last Updated 13 ಜನವರಿ 2018, 6:53 IST
ಬೀದರ್‌ನ ಜನಸೇವಾ ಶಾಲೆಯಲ್ಲಿ ಶುಕ್ರವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿದರು
ಬೀದರ್‌ನ ಜನಸೇವಾ ಶಾಲೆಯಲ್ಲಿ ಶುಕ್ರವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿದರು   

ಬೀದರ್: ಸ್ವಾಮಿ ವಿವೇಕಾನಂದರ 155ನೇ ಜಯಂತಿ ಪ್ರಯುಕ್ತ ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ಶುಕ್ರವಾರ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು.

ಅಂಬೇಡ್ಕರ್‌ ಕಾಲೇಜು: ಲಾಡಗೇರಿಯಲ್ಲಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಬಿ.ಬಿ. ಪೊಲೀಸ್‌ ಪಾಟೀಲ ಮಾತನಾಡಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಸೈಯದ್‌ ಖಲೀಲ್‌, ಉರ್ದು ಉಪನ್ಯಾಸಕ ಡಾ. ಅಬ್ದುಲ್‌ ಖಲೀಲ್‌, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಈರಣ್ಣ ಡಿ. ಲೋಣಿ ಇದ್ದರು.

ಜನಸೇವಾ ಶಾಲೆ: ಪ್ರತಾಪನಗರದ ಜನಸೇವಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ, ‘ಭಾರತದ ಹಿರಿಮೆಯನ್ನು ವಿಶ್ವಕ್ಕೆ ಪರಿಚಯಿಸಿದ ಶ್ರೇಯಸ್ಸು ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ’ ಎಂದು ಹೇಳಿದರು. ಮುಖ್ಯ ಶಿಕ್ಷಕ ಚಂದ್ರಶೇಖರ ಗೋಗಿಕರ್ ಇದ್ದರು. ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ADVERTISEMENT

ಮಡಿವಾಳೇಶ್ವರ ಶಾಲೆ: ಮಂಗಲಪೇಟ್‌ನಲ್ಲಿ ಇರುವ ಮಡಿವಾಳೇಶ್ವರ ಶಿಶುಮಂದಿರ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕರಾದ ದಿಲೀಪಕುಮಾರ ಚಂಡೆಸುರೆ, ಸೀತಾರಾಮ ರಾಠೋಡ್‌ ಮಾತನಾಡಿದರು.

ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯ ಆಡಳಿತ ಮಂಡಳಿ ಸದಸ್ಯ ಶಿವರಾಜ ಹಲಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶರಣು ಪಾಟೀಲ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅರ್ಚನಾ ಶಿರಗಿರೆ ಉಪಸ್ಥಿತರಿದ್ದರು. ಪ್ರಿಯಾಂಕಾ ಶ್ರೀರಂಗ ಸ್ವಾಗತಿಸಿದರು. ಸುಕನ್ಯಾ ರಾಚಯ್ಯ ಸ್ವಾಮಿ ನಿರೂಪಿಸಿದರು. ಚಂದ್ರಶೇಖರ ಶಿವಪ್ಪ ವಂದಿಸಿದರು.

ಅಕ್ಕ ಮಹಾದೇವಿ ಕಾಲೇಜು: ಅಕ್ಕ ಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸಿ.ಬಿ. ದೇವರಾಜ, ಎನ್. ಎಸ್. ಎಸ್. ಅಧಿಕಾರಿ ಡಾ. ವಿಜಯಲಕ್ಷ್ಮಿ ಪಾಟೀಲ ಮಾತನಾಡಿದರು.

ಪ್ರಾಚಾರ್ಯ ಪ್ರೊ. ಶಿವನಾಥ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ವಿಜಯಕುಮಾರ ಬಿರಾದಾರ, ಡಾ. ಓಂಕಾರ ಖಂಡ್ರೆ, ಪ್ರೊ. ಮಂಗಲಾ ಪಾಟೀಲ, ಪ್ರೊ. ಶರಣಪ್ಪ ದುಬಲಗುಂಡೆ ಉಪಸ್ಥಿತರಿದ್ದರು. ಪ್ರೊ. ಸಂಗ್ರಾಮ ಎಂಗಳೆ ಸ್ವಾಗತಿಸಿದರು. ಪ್ರೊ. ಓಂಕಾಂತ ಪಾಟೀಲ ನಿರೂಪಿಸಿದರು. ಡಾ. ವಿಣಾಕುಮಾರಿ ವಂದಿಸಿದರು.

ಎಫ್‌ಪಿಎಐ ಶಾಖೆ: ಭಾರತೀಯ ಕುಟುಂಬ ಯೋಜನಾ ಸಂಘ(ಎಫ್‌ಪಿಎಐ)ದ ಶಾಖೆ ವತಿಯಿಂದ ನಗರದ ಶ್ರೀ ಸಾಯಿ ಚೈತನ್ಯ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಂಘದ ಕಾರ್ಯಕಾರಿಣಿ ಸದಸ್ಯೆ ಡಾ. ಸವಿತಾ ಚಾಕೋತೆ ಉದ್ಘಾಟಿಸಿದರು. ಶ್ರೀ ಸಾಯಿ ಚೈತನ್ಯ ಪದವಿ ಕಾಲೇಜಿನ ಅಧ್ಯಕ್ಷೆ ಜಯಶ್ರೀ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಎಫ್‌ಪಿಎಐ ಶಾಖೆ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ, ಸಂತಪುರದ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕ ವಿವೇಕ ಪ್ರದೀಪ, ಕಾಲೇಜು ಆಡಳಿತಾಧಿಕಾರಿ ಕೆ. ಶಿವಪುತ್ರಪ್ಪ, ಪ್ರಾಚಾರ್ಯ ದತ್ತಾತ್ರೇಯ ಪಾಟೀಲ, ವಿಜಯಲಕ್ಷ್ಮಿ ಹುಡಗೆ ಇದ್ದರು.

ಸರಸ್ವತಿ ಕಾಲೇಜು: ನಗರದ ಸರಸ್ವತಿ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸುರೇಶ ಚನಶೆಟ್ಟಿ ವಿವೇಕ ಬ್ಯಾಂಡ್‌ ಅಭಿಯಾನಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಬಿ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಧನರಾಜ ರೆಡ್ಡಿ, ಶಿವಶರಣಪ್ಪ ಪಾಟೀಲ, ಪ್ರಾಚಾರ್ಯ ಶಿವರಾಜ ಪಾಟೀಲ, ಶಿಕ್ಷಕ ಭಗುಸಿಂಗ್ ಜಾಧವ್‌ ಉಪಸ್ಥಿತರಿದ್ದರು. ಪಲ್ಲವಿ ಸ್ವಾಗತಿಸಿದರು. ಅಭಿಷೇಕ ರಾಠೋಡ್‌ ವಂದಿಸಿದರು. ಪ್ರತೀಕ್ಷಾ ಕರಂಜಿ ನಿರೂಪಿಸಿದರು.

ಸಿದ್ದಿ ವಿನಾಯಕ ಕಾಲೇಜು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರೂ ಯುವ ಕೇಂದ್ರದ ಆಶ್ರಯದಲ್ಲಿ ನಗರದ ಅಂಬೇಡ್ಕರ್‌ ವೃತ್ತ ಸಮೀಪದ ಓಂ ಸಿದ್ದಿ ವಿನಾಯಕ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಯುವ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. ಬೆಮಳಖೇಡದ ಚಂದ್ರಶೇಖರ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ಪ್ರಾಚಾರ್ಯ ಸಿದ್ರಾಮ ಬಿಚಕುಂದೆ ಅಧ್ಯಕ್ಷತೆ ವಹಿಸಿದ್ದರು.

ಲಾಡಗೇರಿ ಹಿರೇಮಠ ಸಂಸ್ಥಾನದ ಗಂಗಾಧರ ಶಿವಾಚಾರ್ಯ, ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಮಾಜಿ ಸದಸ್ಯ ಶಿವಯ್ಯ ಸ್ವಾಮಿ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಪ್ರಮುಖರಾದ ಪ್ರಭುಲಿಂಗ ಬಿರಾದಾರ, ರಾಜಕುಮಾರ ಪಸಾರೆ, ಮಹೇಶ ಗೋರನಾಳಕರ್, ಸುನೀಲ ಭಾವಿಕಟ್ಟಿ, ಜಯಶ್ರೀ ಮೇತ್ರೆ ಇದ್ದರು.
ಶಿವಕುಮಾರ ಸ್ವಾಮಿ ಸ್ವಾಗತಿಸಿದರು. ಶ್ರಾವಂತಿ ನಿರೂಪಿಸಿದರು. ಕಾಲೇಜು ನಿರ್ದೇಶಕ ಡಾ. ನಿತೇಶಕುಮಾರ ಬಿರಾದಾರ ವಂದಿಸಿದರು.

ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ: ತೀಸ್ರಿ ಆಂಖ್ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಕಂದಗೂಳೆ, ಕಾರ್ಯದರ್ಶಿ ಯೋಗೇಶ ನಿಜಲಿಂಗೆ, ಪ್ರಮುಖರಾದ ಶರಣು ಬಿರಾದಾರ, ಬ್ರಹ್ಮಾಜಿ ಪಾಟೀಲ, ಶಿವಶಂಕರ ಪಕ್ಕಾ ಭಾಗವಹಿಸಿದ್ದರು.

ಕೆಎಸ್‌ಇಎಸ್‌ ಕಾಲೇಜು: ಗಣೇಶ ನಗರದ ಕೆ.ಎಲ್‌.ಇ.ಎಸ್‌. ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಸುಧಾಕರ ತಳವಾಡಕರ ಮಾತನಾಡಿದರು. ಮಂಠಾಳೆ ಗುರುಲಿಂಗಪ್ಪ, ಸಂಜಯ ಅತ್ರೆ ಇದ್ದರು. ಶಿವಕುಮಾರ ಎಸ್. ಸ್ವಾಗತಿಸಿದರು. ಬಸವರಾಜ ಎಣಕಿಮುರೆ ವಂದಿಸಿದರು.

ಬಿ.ವಿ. ಭೂಮರಡ್ಡಿ: ನಗರದ ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ ಉಪ್ಪೆ ವಿಶೇಷ ಉಪನ್ಯಾಸ ನೀಡಿದರು.

ಪ್ರಭಾರ ಪ್ರಾಚಾರ್ಯ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಂ. ಬಸವರಾಜ, ಎನ್ಎಸ್.ಎಸ್. ಘಟಕದ ಅಧಿಕಾರಿ ಡಾ. ದೀಪಾ ರಾಗ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಮಲ್ಲಿಕಾರ್ಜುನ ಕೋಟೆ, ಡಾ.ಹಣಮಂತಪ್ಪ ಸೇಡಂಕರ, ಪ್ರೊ. ವಿಜಯಕುಮಾರ ಪಾಂಚಾಳ ಇದ್ದರು.

ಸ್ವಾಮಿ ವಿವೇಕಾನಂದರ ಕುರಿತ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರೊ. ವಾಮನರಾವ್‌ ಕುಲಕರ್ಣಿ ನಿರೂಪಿಸಿದರು. ಡಾ. ಮಲ್ಲಿಕಾರ್ಜುನ ಕೋಟೆ ವಂದಿಸಿದರು.

ಕವಿರತ್ನ ಕಾಳಿದಾಸ ಕಾಲೇಜು: ಮಹಾತ್ಮ ಬೊಮ್ಮಗೊಂಡೇಶ್ವರ ಶಿಕ್ಷಣ ಸಂಸ್ಥೆ ಸಂಚಾಲಿತ ಕವಿರತ್ನ ಕಾಳಿದಾಸ ಪದವಿ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಕುರಿತ ಭಾಷಣ, ನಿಬಂಧ, ರಸಪ್ರಶ್ನೆ ಸ್ಪರ್ಧೆ ನಡೆದವು. ಪ್ರಾಚಾರ್ಯ ಪ್ರಭುಗೌಡ ಬಿ. ಸಿದ್ದಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಲೀಲಾವತಿ ಪೂಜಾರ್ ಇದ್ದರು. ಡಾ. ಗೋವಿಂದ ಮೋತಿರಾಮ ಸ್ವಾಗತಿಸಿದರು. ಕುಲಕರ್ಣಿ ಗಿರಿರಾವ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.