ಸಾಂದರ್ಭಿಕ ಚಿತ್ರ
ಬೀದರ್: ಜಿಲ್ಲೆಯ 37 ಪರೀಕ್ಷಾ ಕೇಂದ್ರಗಳಲ್ಲಿ ಸೋಮವಾರ ನಡೆದ ಪಿಯು ದ್ವಿತೀಯ ಪರೀಖ್ಷೆಗೆ 794 ವಿದ್ಯಾರ್ಥಿಗಳು ಗೈರು ಹಾಜರಾದರು.
ಗಣಿತ ವಿಷಯಕ್ಕೆ 12,792, ಎಜ್ಯುಕೇಶನ್‌ಗೆ 551 ಹಾಗೂ ಬಿಸಿನೆಸ್ ಸ್ಟಡೀಸ್ ವಿಷಯಕ್ಕೆ 2,408 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರು. ಒಟ್ಟು 16,545 ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿಸಿಕೊಂಡಿದ್ದರು. ಈ ಪೈಕಿ 15,751 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು.
‘ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸುಸೂತ್ರವಾಗಿ ಪರೀಕ್ಷೆಗಳು ನಡೆದಿದ್ದು, ಯಾವುದೇ ಡಿಬಾರ್ ಆಗಿಲ್ಲ’ ಎಂದು ಡಿಡಿಪಿಯು ಕಚೇರಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.