ADVERTISEMENT

‘ಸಮಗ್ರ ಅಭಿವೃದ್ಧಿಗೆ ಆದ್ಯತೆ’

ಮಾಲಗಾರ ಸಮಾಜದ ಸನ್ಮಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 7:50 IST
Last Updated 7 ಜುಲೈ 2021, 7:50 IST
ಬಸವಕಲ್ಯಾಣದ ಕಾಳಿಗಲ್ಲಿಯಲ್ಲಿ ಮಾಲಗಾರ (ಮಾಳಿ) ಸಮಾಜ ಸೇವಾ ಸಂಘದಿಂದ ಸೋಮವಾರ ನಡೆದ ವಿವಿಧ ಕ್ಷೇತ್ರದ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಶಾಸಕ ಶರಣು ಸಲಗರ ದೀಪ ಬೆಳಗಿಸಿ ಉದ್ಘಾಟಿಸಿದರು
ಬಸವಕಲ್ಯಾಣದ ಕಾಳಿಗಲ್ಲಿಯಲ್ಲಿ ಮಾಲಗಾರ (ಮಾಳಿ) ಸಮಾಜ ಸೇವಾ ಸಂಘದಿಂದ ಸೋಮವಾರ ನಡೆದ ವಿವಿಧ ಕ್ಷೇತ್ರದ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಶಾಸಕ ಶರಣು ಸಲಗರ ದೀಪ ಬೆಳಗಿಸಿ ಉದ್ಘಾಟಿಸಿದರು   

ಬಸವಕಲ್ಯಾಣ: ‘ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದು, ಕಾಳಿ ಗಲ್ಲಿಯಲ್ಲಿ ಚರಂಡಿ, ಸಿ.ಸಿ ರಸ್ತೆ ನಿರ್ಮಿಸಲಾಗುವುದು’ ಎಂದು ಶಾಸಕ ಶರಣು ಸಲಗರ ಭರವಸೆ ನೀಡಿದ್ದಾರೆ.

ನಗರದ ಕಾಳಿಗಲ್ಲಿಯಲ್ಲಿ ಮಾಲಗಾರ (ಮಾಳಿ) ಸಮಾಜ ಸೇವಾ ಸಂಘದಿಂದ ಸೋಮವಾರ ಆಯೋಜಿಸಿದ್ದ ವಿವಿಧ ಕ್ಷೇತ್ರದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾಲಗಾರರು ತರಕಾರಿ ಸೊಪ್ಪು ಬೆಳೆಸುವುದಲ್ಲದೆ ಮಾರಾಟ ಮಾಡುವ ಕಾಯಕ ಜೀವಿಗಳಾಗಿದ್ದಾರೆ. ಇಲ್ಲಿ ಅವರು ಸಾಕಷ್ಟು ಸಂಖ್ಯೆಯಲ್ಲಿದ್ದು ಅವರ ಪ್ರಗತಿಗೆ ಪ್ರಯತ್ನಿಸುತ್ತೇನೆ. ಕರ್ನಾಟಕ ನೀರಾವರಿ ನಿಗಮದಿಂದ ನಗರದ ಸುತ್ತಲಿನ ಮಾಲಗಾರ ಸಮಾಜದವರ ಹೊಲಗಳಿಗೆ ನೀರಾವರಿಗೆ ಅನುಕೂಲ ಆಗುವಂತೆ ಕೆರೆಗಳಿಗೆ ನೀರು ಭರ್ತಿ ಮಾಡುವ ಯೋಜನೆ ಕೈಗೊಳ್ಳಲಾಗಿದೆ. ಈ ಯೋಜನೆಯಿಂದ ಅನೇಕ ಗ್ರಾಮಗಳ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ದೊರಕಲಿದೆ’ ಎಂದರು.

ADVERTISEMENT

ತಾಲ್ಲೂಕು ಮಾಲಗಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಕಾಶಪ್ಪ ಸಕ್ಕರಬಾವಿ ಮಾತನಾಡಿ, ‘ಮಾಲಗಾರ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು. ಕಾಳಿಗಲ್ಲಿಯು ನಗರದ ಕೊನೆಯ ಭಾಗದಲ್ಲಿದ್ದು ಎಲ್ಲ ಓಣಿಗಳ ಮಳೆ ನೀರು ಇಲ್ಲಿಗೆ ಬಂದು ಸಂಗ್ರಹಗೊಳ್ಳುತ್ತಿದೆ. ಅದು ಮುಂದಕ್ಕೆ ಸಾಗಲು ಚರಂಡಿ ವ್ಯವಸ್ಥೆ ಕಲ್ಪಿಸಬೇಕು’ ಎಂದು ಕೇಳಿಕೊಂಡರು.

ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ತಹಶೀಲ್ದಾರ್ ಸಾವಿತ್ರಿ ಸಲಗರ, ಸಮಾಜ ಸೇವಾ ಸಂಘದ ನಗರ ಘಟಕದ ಅಧ್ಯಕ್ಷ ಬಸವರಾಜ ಬಾಲಿಕಿಲೆ, ನವಲಿಂಗಕುಮಾರ ಪಾಟೀಲ ಮಾತನಾಡಿದರು.

ಶಾಸಕ ಶರಣು ಸಲಗರ ನಗರಸಭೆ ಆಯುಕ್ತ ಶಿವಕುಮಾರ, ಸಬ್ ಇನ್‌ಸ್ಪೆಕ್ಟರ್ ಅಮರ್ ಕುಲಕರ್ಣಿ, ಘನಶಾಮ, ರಮೇಶ ಸಕ್ಕರಬಾವಿ ಅವರನ್ನು ಸನ್ಮಾನಿಸಲಾಯಿತು.

ಪ್ರಮುಖರಾದ ಬಾಬು ನೇತೆ, ಝರಣಪ್ಪ ರಾಸೂರೆ, ವೈಜನಾಥ ಬುಡಗೆ, ಶಿವರಾಜ ಬಾಲಿಕಿಲೆ, ಬಸವರಾಜ ಖರೋಣೆ, ಮಲ್ಲಿಕಾರ್ಜುನ ಸಕ್ಕರಬಾವಿ, ಸಂಜೀವಕುಮಾರ ಮುದಗಡೆ, ಸುಭಾಷ ಸಕ್ಕರಬಾವಿ, ಗುರುನಾಥ ಸಕ್ಕರಬಾವಿ, ದಯಾನಂದ ಮುದಗಡೆ, ಹಣಮಂತಪ್ಪ ಖರೋಣೆ, ರವೀಂದ್ರ ಬುಡಗೆ, ಮಡಿವಾಳಪ್ಪ ಸಾಂಡೆ, ರಾಜಕುಮಾರ ಮಲೋದೆ, ಮಿಥುನ ತೂಗಾವೆ, ವಿಶಾಲ ಸಾಂಡೆ, ಉಮೇಶ ಕೇವಂಟಗೆ, ಶಿವಕುಮಾರ ನೇತೆ, ಬಸಮ್ಮ ಬಪಾರೆ ಪಾಲ್ಗೊಂಡಿದ್ದರು. ರಾಜಕುಮಾರ ಹೂಗಾರ ಮದಕಟ್ಟಿ, ರಾಮಚಂದ್ರ ಕಲ್ಲಹಿಪ್ಪರ್ಗಾ ಸಂಗೀತ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.