
ಕಮಲನಗರ: ‘ನೀರು ಅತ್ಯಮೂಲ್ಯವಾಗಿದ್ದು. ರೈತರು ಅದನ್ನು ಪೋಲು ಮಾಡುವುದು ಹೆಚ್ಚಾಗಿ ಕಂಡು ಬರುತ್ತಿದೆ. ಮಿತವಾಗಿ ಬಳಕೆ ಮಾಡುವ ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ಬೀದರ್‌ನ ಕೃಷಿ ಅಧಿಕಾರಿ ಶತ್ರುಘ್ನ ಎಸ್. ಹೇಳಿದರು.
ತಾಲ್ಲೂಕಿನ ಡೋಣಗಾಂವ್(ಎಂ) ಗ್ರಾಮದಲ್ಲಿ ಮಂಗಳವಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಗ್ರಾಮೀಣ ಕೃಷಿ ಅಭಿವೃದ್ಧಿ ಮತ್ತು ಸಂಶೋಧನೆ ಟ್ರಸ್ಟ್ ಸಹಯೋಗದಲ್ಲಿ ನಡೆದ ಉನ್ನತ ಕೃಷಿ ಪ್ರದರ್ಶನ ಅಭಿಯಾನದಲ್ಲಿ ಅವರು ಮಾತನಾಡಿದರು.
‘ಈ ಭಾಗದ ಹಿರಿಯ ರೈತರು ಕಾಲಾಂತರಗಳಿಂದಲೂ ಡೋಣಗಾಂವ್ ವಾಡಿ ಹೆಬ್ಬಾಳ, ರಂಡ್ಯಾಳ ಕೆರೆ, ಡೋಣಗಾಂವ್ ಕೆರೆ ನೀರು ಎಷ್ಟೊಂದು ಪೋಲಾಗುತ್ತಿರುವುದು ಕಣ್ಣಾರೆ ಕಂಡಿದ್ದಾರೆ. ಡೋಣಗಾಂವ್, ರಂಡ್ಯಾಳ, ಬೆಳಕುಣಿ, ಕೊಟಗ್ಯಾಳ, ಡೋಣಗಾಂವ್ ವಾಡಿ ಸೇರಿದಂತೆ ಹಲವು ಗ್ರಾಮಗಳ ರೈತರು ನೀರಿಗಾಗಿ ಪ್ರತಿದಿನ ಪರಿತಪಿಸುತ್ತಾರೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಸಮಗ್ರ ಕೃಷಿ ಜತೆಗೆ ಭಾರತದಲ್ಲಿ ಅಭಿವೃದ್ಧಿ ಪಡಿಸಿದ ಹೊಸತಳಿಯ ತೊಗರಿಕಾಯಿ(ಐಸಿಪಿಎಚ್-2740) ಹೆಚ್ಚು ಉತ್ಪಾದನೆಯ ಸಂಸ್ಕರಿಸಿದ ತೊಗರಿ ಆಗಿದ್ದು, ಒಂದು ಕಾಯಿಯಲ್ಲಿ ಸರಾಸರಿ 6-8 ಕಾಳುಗಳು ದೊಡ್ಡದಾಗಿದ್ದು ಮತ್ತು ಗುಣಮಟ್ಟದ ಉತ್ತಮ ಬೆಳೆಯಾಗಿದೆ. ಹಾಗೂ ವ್ಯಾಪಾರ ಮತ್ತು ಕೃಷಿಗೆ ಸೂಕ್ತವಾದ ಬೆಳೆ 170-180 ದಿನಗಳಲ್ಲಿ ರಾಶಿ ಬೆಳೆ ಕೈಸೇರುತ್ತದೆ’ ಎಂದು ತಿಳಿಸಿದರು.
ರೈತ ಸಮೂಹ ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಮಾಳಿ, ರಾಜ್ಯ ಕೃಷಿರತ್ನ ರೈತ ಪುರಸ್ಕೃತ ಮುಧೋಳದ ಹಾವಗಿರಾವ ವಟಗೆ ಮಾತನಾಡಿದರು.
ತಹಶೀಲ್ದಾರ್ ಅಮಿತ್‌ಕುಮಾರ ಕುಲಕರ್ಣಿ, ಜಿಲ್ಲಾ ರೈತ ಸಂಘ ಅಧ್ಯಕ್ಷ ಶಿವಕಾಂತ ಖಂಡೆ, ತಾಲ್ಲೂಕು ರೈತ ಸಂಘ ಅಧ್ಯಕ್ಷ ಪ್ರವೀಣಕುಮಾರ ಕುಲಕರ್ಣಿ, ರೈತ ಸಂಘಟನೆ ಅಧ್ಯಕ್ಷ ಅಂಕುಶ ವಾಡಿಕರ್, ನಾಗನಾಥ ಚಿಟಮೆ, ವಿಠ್ಠಲ ಪಾಟೀಲ, ಉತ್ತಮರಾವ ಮಾನೆ, ಉಮಾಕಾಂತ ಪಾಟೀಲ, ಉಮಾಕಾಂತ ಮಾಳಿಕೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಪ್ರಗತಿಪರ ರೈತರು ಪಾಲ್ಗೊಂಡಿದ್ದರು.
ಭಾರತೀಯ ಗೀರ್ ಹಸು ಒಂದು ಪ್ರಾಚೀನ ಶ್ರೇಷ್ಠ ದೇಶಿ ಗೋತಳಿಯಾಗಿದೆ. ಬೀರಿ(ಬಿ) ಗ್ರಾಮದ ಪ್ರಗತಿಪರ ರೈತ ಅನೀಲಕುಮಾರ ದಂಪತಿ ಸಾಕಣೆ ಮಾಡುತ್ತಿರುವುದಕ್ಕೆ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.