ADVERTISEMENT

ಏಡ್ಸ್ ಕೊನೆಗೊಳಿಸಿ: ವಿಜಯ ಕೊಂಡಾ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 3:06 IST
Last Updated 4 ಡಿಸೆಂಬರ್ 2021, 3:06 IST
ಬೀದರ್‌ನ ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಎಫ್‍ಪಿಎಐ ಸ್ಥಳೀಯ ಶಾಖೆ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಮಾತನಾಡಿದರು. ಡಾ. ವಿಜಯ ಕೊಂಡಾ, ಡಾ. ಚಂದ್ರಪ್ಪ ಭತಮುರ್ಗೆ, ವೀರಣ್ಣ ಕೆ ಇದ್ದರು

ಬೀದರ್: ‘ಕೋವಿಡ್ ಮಾದರಿಯಲ್ಲೇ ಎಚ್‍ಐವಿ, ಏಡ್ಸ್ ಜಾಗೃತಿ ಆಗಬೇಕಿದೆ. ಏಡ್ಸ್ ಕೊನೆಗೊಳಿಸಬೇಕಿದೆ’ ಎಂದು ಭಾರತೀಯ ಕುಟುಂಬ ಯೋಜನಾ ಸಂಘದ ಸ್ಥಳೀಯ ಶಾಖೆಯ ಗೌರವ ಖಜಾಂಚಿ ಡಾ. ವಿಜಯ ಕೊಂಡಾ ಹೇಳಿದರು.

ಭಾರತೀಯ ಕುಟುಂಬ ಯೋಜನಾ ಸಂಘದ ವತಿಯಿಂದ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ನಗರದ ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ,‘ಏಡ್ಸ್ ಹೇಗೆ ಹರಡುತ್ತದೆ ಎನ್ನುವುದರ ಕುರಿತು ಯುವಜನತೆ ಮಾಹಿತಿ ಪಡೆಯಬೇಕು’ ಎಂದು ತಿಳಿಸಿದರು. ಸಂಘದ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಮಾತನಾಡಿ,‘2030ರ ವೇಳೆಗೆ ದೇಶವನ್ನು ಏಡ್ಸ್ ಮುಕ್ತಗೊಳಿಸುವ ಹೊಣೆ ಎಲ್ಲರ ಮೇಲಿದೆ’ ಎಂದು ಹೇಳಿದರು. ಪ್ರಾಚಾರ್ಯ ಡಾ.ಚಂದ್ರಪ್ಪ ಭತಮುರ್ಗೆ, ಸಂಘದ ಕಾರ್ಯಕ್ರಮ ಅಧಿಕಾರಿ ವಿಜಯಲಕ್ಷ್ಮಿ ಹುಡಗೆ ಇದ್ದರು. ಉಪನ್ಯಾಸಕ ವೀರಣ್ಣ ಕೆ. ಸ್ವಾಗತಿಸಿದರು.

ಎಫ್‍ಪಿಎಐನಿಂದ ಪ್ರತಾಪನಗರದ ಮೆಟ್ರಿಕ್ ನಂತರದ ಬಾಲಕ, ಬಾಲಕಿಯರ ವಸತಿ ನಿಲಯದಲ್ಲೂ ಏಡ್ಸ್ ಜಾಗೃತಿ ಕಾರ್ಯಕ್ರಮ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.