ಹುಮನಾಬಾದ್ (ಬೀದರ್ ಜಿಲ್ಲೆ): ತಾಲ್ಲೂಕಿನ ಜಲಸಂಗಿ ಗ್ರಾಮದಲ್ಲಿ ಶನಿವಾರ ಬೃಹತ್ ಗಾತ್ರದ ಏರ್ ಬಲೂನ್ ಬಿದ್ದಿದ್ದು, ಅದನ್ನು ಕಂಡು ಕೆಲಕಾಲ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದರು.
ಜಲಸಂಗಿ ಗ್ರಾಮದ ಬೇವಿನ ಮರದ ಮೇಲೆ ಬಲೂನ್ ಬಿದ್ದಿದೆ. ದೊಡ್ಡ ಗಾತ್ರದ ಚಕ್ರಗಳು ಹಾಗೂ ಮಶೀನ್ ಅದಕ್ಕೆ ಅಳವಡಿಸಲಾಗಿತ್ತು. ವಿಷಯ ತಿಳಿದು ಗ್ರಾಮಸ್ಥರು ನೆರೆದಿದ್ದರು. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿದರು.
‘ಹೈದರಾಬಾದ್‌ನ ‘ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್’ (ಟಿಐಎಫ್‌ಆರ್) ಸಂಸ್ಥೆಗೆ ಸೇರಿದ ಏರ್ ಬಲೂನ್ ಇದಾಗಿದೆ. ಹವಾಮಾನ ಅಧ್ಯಯನಕ್ಕಾಗಿ ಏರ್ ಬಲೂನ್ ಬಿಡಲಾಗಿತ್ತು. ತಾಂತ್ರಿಕ ಕಾರಣದಿಂದ ಕೆಳಗೆ ಬಿದ್ದಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.